ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಯ ಶುಭಾಶಯದೊಂದಿಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸ್ವಾಮಿ ಶ್ರೀ ಕೃಷ್ಣಾಯ ನಮ: ಮಂತ್ರ ಪಠಣ 1008 ಬಾರಿ ಕಾರ್ಯಕ್ರಮದಲ್ಲಿ ಪರ್ಯಾಯ ಪೀಠಾಧಿಪತಿ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರು ದೀಪ ಬೆಳಗಿಸಿ ಚಾಲನೆ ನೀಡಿ ಶುಭಹಾರೈಸಿದರು.
ಶ್ರೀ ಪುತ್ತಿಗೆ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯರು, ಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯರು ಹಾಗೂ ಪತಂಜಲಿ ಜಿಲ್ಲಾ ಪ್ರಭಾರಿಗಳಾದ ಕೆ. ರಾಘವೇಂದ್ರ ಭಟ್, ವೆಂಕಟೇಶ ಮೆಹಂದಳೆ, ಜಗದೀಶ್ ಕುಮಾರ್, ಲೀಲಾ ಆರ್. ಅಮೀನ್ ಹಾಗೂ ವಿವಿಧ ಕಕ್ಷೆಯ ಯೋಗ ಬಂಧುಗಳವರು ಹಾಜರಿದ್ದು ಮಂತ್ರಪಠಣದಲ್ಲಿ ಭಾಗಿಯಾದರು.