ಚಾರ: ಆಟಿಡೊಂಜಿ ಕೆಸರ್ದ ಗೊಬ್ಬು

0
6

ಹೆಬ್ರಿ: ಗೆಳೆಯರ ಬಳಗ ಚಾರ ಹಾಗೂ ಚಾರ ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಟಿಡೊಂಜಿ ಕೆಸರ್ದ ಗೊಬ್ಬು ಕಾರ್ಯಕ್ರಮವು ದಿನಾಂಕ 03.08.2025 ರಂದು ಚಾರ ಗ್ರಾಮದ ಗಾಂಧಿನಗರದ ಮೆಸ್ಕಾಂ ಆಫೀಸ್ ಎದುರಿನ ಗದ್ದೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಾರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಗೆಳೆಯರ ಬಳಗ ಚಾರ ಇದರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ಯಾವುದೇ ರಾಜಕೀಯ ರಹಿತವಾಗಿರುವುದು ಬಹಳ ಸಂತೋಷದ ಸಂಗತಿ, ಇಂತಹ ಕಾರ್ಯಕ್ರಮಗಳು ಪ್ರತಿ ಗ್ರಾಮಗಳಲ್ಲೂ ನಡೆಯುವಂತಾಗಬೇಕು ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಹೆಬ್ರಿ ವಲಯ ಯೋಜನಾಧಿಕಾರಿ ಶ್ರೀಮತಿ ಲೀಲಾವತಿ ಮಾತನಾಡಿ ಯುವಕರು ಸಂಘಟಿತರಾಗಬೇಕು ದುಶ್ಚಟಗಳಿಂದ ದೂರವಿರಬೇಕು ಅದಕ್ಕಾಗಿ ಗೆಳೆಯರ ಬಳಗ ಸಂಘಟನೆ ಕೈ ಜೋಡಿಸಬೇಕು ಯುವಕರು ಹೆಚ್ಚು ಹೆಚ್ಚಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೆಳೆಯರ ಬಳಗ ಚಾರ ಇದರ ಅಧ್ಯಕ್ಷರಾದ ಸುರೇಂದ್ರ ಪೂಜಾರಿ ವಹಿಸಿದ್ದರು, ವೇದಿಕೆಯಲ್ಲಿ ಸಂಘಟನೆಯ ಗೌರವಾಧ್ಯಕ್ಷರಾದ ಉದ್ಯಮಿ ಗೋಪಾಲ ನಾಯ್ಕ್, ಹೋಟೆಲ್ ರಾಜ್ ಮಾಲಕರಾದ ದಯಾನಂದ ಶೆಟ್ಟಿ, ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ.ರಾಧಾಕೃಷ್ಣ ರಾವ್, ಚಾರ ಗ್ರಾಮ ಪಂಚಾಯತ್ ಸದಸ್ಯರಾದ ರಾಘವೇಂದ್ರ, ಉದ್ಯಮಿ ಮಂಜುನಾಥ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.
ವಕೀಲರಾದ ಸುನಿಲ್ ಪೂಜಾರಿ ಸ್ವಾಗತಿಸಿದರು, ನಾಗೇಂದ್ರ ನಾಯ್ಕ್ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಎಲ್ಲಾ ಚಾರ ಗ್ರಾಮದ ಗ್ರಾಮಸ್ಥರಿಗೆ ಸಂಪ್ರದಾಯಕ ಕ್ರೀಡೆಗಳಾದ ಕೆಸರುಗದ್ದೆ ಓಟ, ಹಾಳೆಬಂಡಿ ಓಟ,ವಾಲಿಬಾಲ್,ತ್ರೋ ಬಾಲ್,ಸಂಗೀತ ಕುರ್ಚಿ,ಗೂಟಕ್ಕೆ ಸುತ್ತಿ ಓಡುವುದು,ಹಗ್ಗ ಜಗ್ಗಾಟ ಮುಂತಾದ ಸ್ಪರ್ಧೆಗಳು ಜರುಗಿದವು.

LEAVE A REPLY

Please enter your comment!
Please enter your name here