ಬೆಳ್ತಂಗಡಿ : ಮೆಕ್ಕೆಜೋಳ ಸಾಗಿಸುತ್ತಿದ್ದ ಲಾರಿಗೆ ಅಕಸ್ಮಿಕ ಲಾರಿಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋದ ಘಟನೆ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.
ಚಿಕ್ಕಮಗಳೂರಿನಿಂದ ಮೂಡಬಿದಿರೆ ಕಡೆಗೆ ಮೆಕ್ಕೆಜೋಳದ ಲೋಡು ತೆಗೆದುಕೊಂಡು ಹೋಗುತ್ತಿದ್ದ KA-13-AA-4758 ನಂಬರಿನ ಲಾರಿ ಜ.9 ರಂದು ಮಧ್ಯರಾತ್ರಿ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ ಅಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಘಟನೆ ವೇಳೆ ಲಾರಿಯಲ್ಲಿದ್ದ ಚಾಲಕ ಸೇರಿ ಮೂವರು ಲಾರಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಮೆಕ್ಕೆಜೋಳ ಬಂಕಿಗಾಹುತಿಯಾಗಿದೆ.

ಈ ಹೊಸ ಲಾರಿ ಮಾಲೀಕರಿಗೆ ಬಂದು 40 ದಿನವಾಗಿದೆ ಅಷ್ಟೇ , ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳೀಯ ಯವಕರು ಬೆಳ್ತಂಗಡಿ ಅಗ್ನಿಶಾಮಕ ದಳ ಮತ್ತು ಬೆಳ್ತಂಗಡಿ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದು. ಸ್ಥಳಕ್ಕೆ ಆಗಮಿಸಿ ಲಾರಿ ನಂದಿಸಲು ಸಹಕಾರಿಸಿದ್ದಾರೆ. ಬಳಿಕ ಸುಗಮ ಸಂಚಾರಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಕ್ರಮ ಕೈಗೊಂಡರು.


