ಸುರತ್ಕಲ್ : ಚೇಳೈರು ಬಳಿ ಮುಡಾ ನಿರ್ಮಿಸಲಿರುವ ವಸತಿ ಯೋಜನೆ ಬಡಾವಣೆ ಕಾಮಗಾರಿ ಅವಾಂತರದಿಂದ ಸ್ಥಳೀಯರು , ಕೃಷಿಕರ ಬದುಕು ಹೈರಾಣಾಗಿದೆ ನಿಧಾನಗತಿ ಯೋಜನೆ ಅವೈಜ್ಞಾನಿಕ ಕಾಮಗಾರಿಯೆ ಕಾರಣ ಎಂದು ಸಂತ್ರಸ್ಥರು ದೂರಿದ್ದಾರೆ. ಚೇಳೈರು, ಮಧ್ಯ ಗ್ರಾಮಗಳಲ್ಲಿ ಸುಮಾರು 74 ಎಕ್ರೆ ಜಾಗ 905 ನಿವೇಶನ ನೀಡಲು 2014 ರಲ್ಲಿ ವಿನಯಕುಮಾರ್ ಸೊರಕೆ ನಗರಾಭಿವೃದ್ಧಿ ಸಚಿವರಾಗಿದ್ದಾಗ ಭೂ ಸ್ವಾಧೀನವಾಗಿತ್ತು ಮೊದಲ ಹಂತದಲ್ಲಿ ಚೇಳೈರುವಿನಲ್ಲಿ 40 ಎಕರೆ ಜಾಗದಲ್ಲಿ 450 ನಿವೇಶನ ನೀಡುವರೇ ಜಾಗದ ಅಭಿವೃದ್ದಿಗೆ 30 ಕೋಟಿ ವೆಚ್ಚದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಶಿಲಾನ್ಯಾಸ ನಡೆಸಲಾಗಿತ್ತು ನಂತರ ಸರಕಾರ ಬದಲಾವಣೆ ಅದ ಕಾರಣ ಕಾಮಗಾರಿ ಸ್ಥಗೀತಗೊಂಡಿದೆ ಯೋಜನೆ ನಿವೇಶನ ಎತ್ತರದ ಸ್ಥಳದಲ್ಲಿದ್ದು ಇದಕ್ಕೆ ತುಂಬಿಸಿದ ಮಣ್ಣು ಮಳೆ ಶುರುವಾಗುತ್ತಿದ್ದಂತೆ ತಗ್ಗಿನಲ್ಲಿರುವ ಮನೆಗಳು ಕೃಷಿ ಭೂಮಿಗೆ ನುಗ್ಗುತ್ತಿದೆ ಕೊಲ್ಯ ದಲ್ಲಿ ಐದು ಮನೆಗಳು ತುಂಬಾ ಅಪಾಯದ ಸ್ಥಿತಿಯಲ್ಲಿದೆ ಸಮಸ್ಯೆ ಬಗ್ಗೆ,ಗ್ರಾಮ ಪಂಚಾಯತ್, ಗ್ರಾಮಸ್ಥರು, ಕೊಲ್ಯ ಜಾರಂದಾಯ ದೈವಸ್ಥಾನದ ವತಿಯಿಂದ ಮನವಿ ಸಲ್ಲಿಸಲಾಗಿದೆ ಚೇಳೈರು, ಮಧ್ಯ ಗ್ರಾಮದಲ್ಲಿ ಮುಡಾದವರು ಜಾಗ ಖರೀದಿಸುವ ವೇಳೆಯಲ್ಲಿ ಒಂದೇ ಸಮಾನಾಗಿ ಜಾಗವನ್ನು ತೆಗೆದುಕೊಳ್ಳದೇ ಒಬ್ಬರ ಜಾಗವನ್ನು ಬಿಟ್ಟು ಇನ್ನೊಬ್ಬರ ಜಾಗ ತೆಗೆದ ಕಾರಣ ನಡುವಿನ ಜಾಗದವರಿಗೆ ಸಮಸ್ಯೆ ಅಗಿದೆ ಮುಡಾದವರು ಸುಮಾರು 70 ಕೋಟಿಯಷ್ಟು ದೊಡ್ಡ ಮೊತ್ತದ ಯೋಜನೆಯ ಕಾಮಗಾರಿಯನ್ನು ಸರಿಯಾದ ರೀತಿಯಲ್ಲಿ ಮಾಡದಿರುವುದು ಸಂಶಯಕ್ಕೆ ಕಾರಣವಾಗಿದೆ ಜಾಗ ಖರೀದಿಯನ್ನು ಮಾಡುವಾಗಲೂ ಸರಿಯಾದ ಕ್ರಮದಲ್ಲಿ ಮಾಡದಿರುವುದು ಕಡಿಮೆ ದರದಲ್ಲಿ ಕೃಷಿಕರಿಂದ ಜಾಗ ತೆಗೆದುಕೊಂಡು ಈಗ ಕೃಷಿಕರಿಗೆ ತೊಂದರೆ ಉಂಟು ಮಾಡುತ್ತಿರುವುದು ಜನರ ಅಕ್ರೋಶಕ್ಕೆ ಕಾರಣವಾಗಿದೆ ಜಾಗ ಖರೀದಿ ಮತ್ತು ಅಭಿವೃದ್ಧಿ ಕಾಮಗಾರಿ ಸರಿಯಾಗಿ ಮೂಡಾದವರು ಮಾಡದ ಕಾರಣ ಅಸಮರ್ಪಕ ಕಾಮಗಾರಿಯ ಬಗ್ಗೆ ಲೋಕಾಯುಕ್ತ ಮತ್ತು ಸಂಬಂಧಿಸಿದ ಇಲಾಖೆಗೆ ದೂರು ನೀಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಮಣ್ಣು ತುಂಬಿಸುವ ಭರದಲ್ಲಿ ಇಲ್ಲಿನ ನಗುಳಿಗ ಪಂಜುರ್ಲಿ ಕಟ್ಟೆ ಮಣ್ಣಿನಡಿ ಸೇರಿದೆ ಕಾಕತಾಳೀಯ ಎಂಬಂತೆ ಕಾಮಗಾರಿಗೂ ಹಲವು ವಿಘ್ನ ಗಳು ಎದುರಾಗಿ ಕಾಮಗಾರಿ ಸ್ಥಗಿತಗೊಂಡಿದೆ ಮಾತ್ರವಲ್ಲದೆ ಕೊಲ್ಯ ಜಾರಂತಾಯ ದೈವಸ್ಥಾನದ ಜಾತ್ರೆ ನಡೆಯುವ ಸಂದರ್ಭದಲ್ಲಿ ದೈವದ ಬಂಡಿ ಎಳೆಯುವ ಗದ್ದೆಗೆ ಮೂಡಾದವರು ಕಲ್ಲು ಹಾಕಲು ಬಂದಿರುವುದು ದೈವದ ಕೋಪಕ್ಕೆ ಪಾತ್ರವಾಗಿದೆ ದೈವವು ನನ್ನ ಜಾಗವನ್ನು ಯಾವುದೇ ಕಾರಣಕ್ಕೆ ಬಿಟ್ಟುಕೊಡುವುದಿಲ್ಲ ಎಂಬ ಅಭಯ ನೀಡಿರುವುದು ಇಲ್ಲಿ ಉಲ್ಲೇಖನಿಯವಾಗಿದೆ ನಗರಾಭಿವೃದ್ಧಿ ಪ್ರಾಧಿಕಾರವು ಮಣ್ಣು ತುಂಬಿಸುವ ಮುಂಚೆಯೇ 25 ಮನೆಗಳ ಭದ್ರತೆ ಹಾಗೂ ಸುರಕ್ಷತೆಗೆ ತಡೆಗೋಡೆ ನಿರ್ಮಿಸಿ ಕಾಮಗಾರಿ ಆರಂಭಿಸಬೇಕಿತ್ತು ಇದೀಗ ಹಣ ಇಲ್ಲ ಎಂದರೆ ಹೇಗೆ ತತ್ ಕ್ಷಣ ಇದಕ್ಕೊಂದು ತುರ್ತು ಪರಿಹಾರ ರೂಪಿಸಲೇಬೇಕು ಎನ್ನುತ್ತಾರೆ ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ಶೆಟ್ಟಿ ಮತ್ತು ಸ್ಥಳೀಯರಾದ ನಾಗೇಶ್ ಕೊಲ್ಯ.
ಅವೈಜ್ಞಾನಿಕ ಕಾಮಗಾರಿ ಬಗ್ಗೆ ಪಂಚಾಯತ್ ವತಿಯಿಂದ ಮನವಿ ನೀಡಿ ಒತ್ತಾಯಿಸುತ್ತಲೇ ಬಂದಿದ್ದೇವೆ ಕಾಮಗಾರಿ ಆರಂಭಿಸುವಾಗ ಒಂದು ಗುಡ್ಡದ ಪ್ರದೇಶ ಸಮತಟ್ಟು ಮಾಡುವಾಗ ಸಮಸ್ಯೆ ಅರಿತು ಇತರ ಭೂಮಿಯ ಕಾಮಗಾರಿ ಆರಂಭಿಸಬೇಕಿತ್ತು ಕಾಮಗಾರಿ ನಿಲ್ಲಿಸಿದ್ದೆ ದೊಡ್ಡ ತಪ್ಪು ಅವೈಜ್ಞಾನಿಕ ಕಾಮಗಾರಿಯಿಂದ ಗ್ರಾಮದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ ತಡೆಗೋಡೆ ನಿರ್ಮಿಸಿ, ಗದ್ದೆ ತೋಟಕ್ಕೆ ಬಿದ್ದ ಮಣ್ಣು ತೆರವು ಮಾಡಬೇಕು ಎಂದು
ಜಯಾನಂದ ಚೇಳೈರು
ಅಧ್ಯಕ್ಷರು ಚೇಳೈರು ಗ್ರಾಮ ಪಂಚಾಯತ್ ತಿಳಿಸಿದ್ದಾರೆ.
ಮೂಡಾದ ಈ ದೊಡ್ಡ ಅಭಿವೃದ್ದಿ ಕಾಮಗಾರಿ ಯೋಜನೆ ಬಿಜೆಪಿ ಸರಕಾರದ ಅವಧಿಯಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್ ಅವರ ಸತತ ಪ್ರಯತ್ನದಿಂದ ಅನಮೋದನೆಗೊಂಡಿದೆ ಅದರೆ ನಂತರ ದಿನಗಳಲ್ಲಿ ಕಾಮಗಾರಿ ಆರಂಭಿಸುವಾಗ ಶಾಸಕರ ಗಮನಕ್ಕೆ ತರಲಿಲ್ಲ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಮೂಡಾದ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡು ಜನರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸದೆ ಕಾಮಗಾರಿ ನಡೆಸಬಾರದಾಗಿ ಸೂಚನೆ ನೀಡಿದ್ದಾರೆ ಸ್ಥಳೀಯ ಪಂಚಾಯತ್ ,ಶಾಸಕರನ್ನು,ಸ್ಥಳೀಯ ನಿವಾಸಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಮೂಡಾವು ಎಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡ ಕಾರಣ ಈ ರೀತಿ ಅಗಿದೆ ಮುಂದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ನಡೆಸಬೇಕು ಎಂದು
ಪುಷ್ಪರಾಜ್ ಶೆಟ್ಟಿ
ಮಾಜಿ ಅಧ್ಯಕ್ಷರು ಚೇಳೈರು ಗ್ರಾಮ ಪಂಚಾಯತ್ ತಿಳಿಸಿದ್ದಾರೆ.
ಸ್ಥಳೀಯರಾದ ಅರುಣ್ ಕೊಲ್ಯ, ಶ್ರೀಧರ ಕೊಲ್ಯ, ಪ್ರವೀಣ್ ಕೊಲ್ಯ ಮುಂತಾದವರು ಉಪಸ್ಥಿತರಿದ್ದರು.

