ಸುರತ್ಕಲ್: ಚೇಳ್ಯಾರು ಅನುದಾನಿತ ಕಳುವಾರು ಹಿರಿಯ ಪ್ರಾಥಮಿಕ ಶಾಲೆ ಮತ್ತು ಆಂಗ್ಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದು ಕೃಷ್ಣ ವೇಷ ಸ್ಪರ್ಧೆ ವಿದ್ಯಾವಿಕಾಸ ಟ್ರಸ್ಟ್ ಮತ್ತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಳ ಗಂಗಾಧರ ಪೂಜಾರಿ ಚೇಳ್ಯಾರು ಇವರ ಪ್ರಾಯೋಜಕತ್ವದಲ್ಲಿ ನಡೆಯಿತು.
ತೀರ್ಪುಗಾರರಾಗಿ ದೈಹಿಕ ಶಿಕ್ಷಕ ಪ್ರಜ್ವಲ್ ಶ್ರೀಯಾನ್ ಮತ್ತು ನೃತ್ಯ ಶಿಕ್ಷಕಿ ಸುನಿತಾ ಕೇಶವ್ ಸಹಕರಿಸಿದರು. ಮುಖ್ಯ ಶಿಕ್ಷಕಿ ಶೋಭಾ ಸಿ, ಪಂಚಾಯತ್ ಉಪಾಧ್ಯಕ್ಷೆ ರೇಖಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ರಶ್ಮಿ, ಮತ್ತು ಸಹ ಶಿಕ್ಷಕರು ಉಪಸ್ಥಿತರಿದ್ದರು.