ಚೇತನಾ ಕರುಣಾಕರ್ ಕುಲಾಲ್ – ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಣ ಸ್ನಾತಕೋತ್ತರ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕ

0
76

ಚೇತನಾ ಕರುಣಾಕರ್ ಕುಲಾಲ್ ಅವರು ಬೆಂಗಳೂರು ವಿಶ್ವವಿದ್ಯಾಲಯದ 2022–24ನೇ ಸಾಲಿನ ಶಿಕ್ಷಣ ಸ್ನಾತಕೋತ್ತರ (Master of Education) ವಿಭಾಗದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು, ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ. ಈ ಗೌರವವನ್ನು ಅವರು ಅಕ್ಟೋಬರ್ 8ರಂದು ಬೆಂಗಳೂರು ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ 60ನೇ ವಾರ್ಷಿಕ ದೀಕ್ಷಾಂತ ಸಮಾರಂಭದಲ್ಲಿ ಸ್ವೀಕರಿಸಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಥಾವರ್ ಚಂದ್ ಗೆಹ್ಲೋಟ್, ಕುಲಸಚಿವರಾದ ಡಾ. ಎಸ್.ಎಂ. ಜಯಕರ, ಪ್ರೋಕುಲಪತಿಗಳಾದ ಡಾ. ಸಿ.ಎಂ. ಸುಧಾಕರ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಈ ದೀಕ್ಷಾಂತ ಸಮಾರಂಭದಲ್ಲಿ ಒಟ್ಟು 298 ಚಿನ್ನದ ಪದಕಗಳು ಹಾಗೂ 157 ಪದಕಪ್ರಾಪಕರು ಭಾಗವಹಿಸಿದ್ದರು. ಚೇತನಾ ಕರುಣಾಕರ್ ಕುಲಾಲ್ ಅವರು ಈ ಕಾರ್ಯಕ್ರಮದಲ್ಲಿ ಒಟ್ಟು ನಾಲ್ಕು ಚಿನ್ನದ ಪದಕಗಳನ್ನು ಪಡೆದ ಗೌರವವನ್ನು ಹೊಂದಿದ್ದಾರೆ.

ಶ್ರೀಮತಿ ಚೇತನಾ ಕರುಣಾಕರ್ ಕುಲಾಲ್ ರವರು ನೈನಾಡಿನ ಶಿವಪ್ಪ ಮೂಲ್ಯ ಮತ್ತು ಪುಷ್ಪಾವತಿ ದಂಪತಿಗಳ ಸುಪುತ್ರಿಯಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ.
ಅದೇ ರೀತಿ ಅವರು ಶಿಕ್ಷಣ ವಿಭಾಗದಲ್ಲಿ KSET ಪರೀಕ್ಷೆಯನ್ನು ಉತ್ತೀರ್ಣಗೊಂಡು 17ನೇ ರ‍್ಯಾಂಕ್‌ ಪಡೆದಿದ್ದಾರೆ.
ಅದೇ ವಿಭಾಗದ NET ಪರೀಕ್ಷೆಯಲ್ಲಿ 94% ಅಂಕಗಳನ್ನು ಗಳಿಸಿದ್ದಾರೆ.

ಪ್ರಸ್ತುತ ಅವರು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ (KSOU), ಮೈಸೂರು ಯಲ್ಲಿ ಶಿಕ್ಷಣ ವಿಷಯದಲ್ಲಿ ಪಿಎಚ್.ಡಿ. ಪದವಿಯನ್ನು ಮುಕ್ತ ಗಂಗೋತ್ರಿ ಕ್ಯಾಂಪಸ್‌ನ ಸಹ ಪ್ರಾಧ್ಯಾಪಕರಾದ ಡಾ. ಕೃಷ್ಣಪ್ಪ ಸರ್ ಅವರ ಮಾರ್ಗದರ್ಶನದಲ್ಲಿ ಮುಂದುವರಿಸಿಕೊಂಡಿದ್ದಾರೆ.

ಚೇತನಾ ಕರುಣಾಕರ್ ಕುಲಾಲ್ ರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಂತ ಜೋಸೆಫ್ ಅನುದಾನಿತ ಶಾಲೆ, ನೈನಾಡು , ಹೈಸ್ಕೂಲ್ ಶಿಕ್ಷಣವನ್ನು ಸರ್ಕಾರಿ ಪ್ರೌಢಶಾಲೆ ನೈನಾಡು , ಕಾಲೇಜು ಶಿಕ್ಷಣವನ್ನು ವಾಮದಪದವು ಹಾಗೂ ತಮ್ಮ ಸ್ನಾತಕೋತ್ತರ (M.Sc)(ರಸಾಯನಶಾಸ್ತ್ರ )ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯ, ಕೊಣಾಜೆ ಯಲ್ಲಿ ಪೂರ್ಣಗೊಳಿಸಿರುತ್ತಾರೆ.

LEAVE A REPLY

Please enter your comment!
Please enter your name here