ಕಾರ್ಕಳ: ಚೇತನಾ ವಿಶೇಷ ಶಾಲೆ, ಕಾರ್ಕಳ ಇಲ್ಲಿಯ ವಿಶೇಷ ಚೇತನರು ತಯಾರಿಸಿದ ಬಣ್ಣ ಬಣ್ಣದ ಹಣತೆಗಳನ್ನು ಈ ಬಾರಿ ಕಾರ್ಕಳದ ಮಂಜುನಾಥ ಪೈ ಮೆಮೋರಿಯಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ತಂಡದ ವಿದ್ಯಾರ್ಥಿಗಳು ಸುಮಾರು ರೂ. ೨೫,೦೦೦/- ಮೌಲ್ಯದ ಹಣತೆಗಳನ್ನು ಮಾರಾಟ ಮಾಡಿ ಅದನ್ನು ಶಾಲಾ ಆಡಳಿತ ಮಂಡಳಿಗೆ ಕಾಲೇಜಿನ ಎನ್.ಎಸ್.ಎಸ್ ಕೋ-ಆರ್ಡಿನೇಟರ್ ಆದ ಶ್ರೀ ಚಂದ್ರಕಾಂತ್ ಶೆಣೈ ಅವರ ಮೂಲಕ ಹಸ್ತಾಂತರಿಸಿದರು. ಸಂಸ್ಥೆಗೆ ನೀಡಿದ ಸಹಕಾರಕ್ಕೆ ಚೇತನಾ ವಿಶೇಷ ಶಾಲೆಯ ಸಂಚಾಲಕರಾದ ರಘುನಾಥ್ ಶೆಟ್ಟಿಯವರು ಮಂಜುನಾಥ ಪೈ ಮೆಮೋರಿಯಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕ ವರ್ಗ ಹಾಗೂ ಎನ್.ಎಸ್.ಎಸ್ ತಂಡದ ವಿದ್ಯಾರ್ಥಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಹಣತೆ ಮಾರಾಟಕ್ಕೆ ಹೆಚ್ಚಿನ ಶ್ರಮ ವಹಿಸಿದ ಸೃಜನ್, ನವನೀತ್, ಸಮರ್ಥ್, ಕಾರ್ತಿಕ್ ಮತ್ತು ಕೌಶಿಕ್ ಇವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಲತಾ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

