ಚಿಕ್ಕಮಗಳೂರು : ಅಂಗಡಿಗೆ ನುಗ್ಗಿ 80 ಸಾವಿರ ಹಣ, ಡ್ರೈಫ್ರೂಟ್ಸ್ ಕದ್ದ ಕಳ್ಳ

0
15

ಚಿಕ್ಕಮಗಳೂರು : ಕಳ್ಳನೋರ್ವ ಅಂಗಡಿಯೊಂದಕ್ಕೆ ನುಗ್ಗಿ ಒಳಹಣ್ಣುಗಳನ್ನೇ ಕಳ್ಳತನ ಮಾಡಿದ್ದು, ಈತನ ಕಳ್ಳತನದ ಕೃತ್ಯ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಚಿಕ್ಕಮಗಳೂರಿನ ಶೃಂಗೇರಿ ಪಟ್ಟಣದ ಶೃಂಗೇರಿ ಶಾರದಾಂಬೆ ದೇಗುಲದ ಪಕ್ಕದ ಅಂಗಡಿಯಲ್ಲಿ ಈ ಕಳ್ಳತನದ ಘಟನೆ ನಡೆದಿದೆ.

ಅಂಗಡಿಯಲ್ಲಿ ಕಳ್ಳತನಕ್ಕೆ ಬಂದ ಕಳ್ಳ ಪಿಸ್ತಾ ಬಾದಾಮಿ ಗೋಡಂಬಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾನೆ. 10 ಕೆಜಿಗೂ ಅಧಿಕ ಬಾದಾಮಿ, ಪಿಸ್ತಾ ಹಾಗೂ ಗೋಡಂಬಿ ಕಳ್ಳತನ ಮಾಡಿದ್ದು, ಇದರ ಜೊತೆಗೆ 80 ಸಾವಿರ ಹಣವನ್ನು ಕಳ್ಳ ಕದ್ದು ಪರಾರಿಯಾಗಿದ್ದಾನೆ. ಕಳ್ಳತನ ನಡೆದ ಅಂಗಡಿಯೂ ಶೃಂಗೇರಿ ಶಾರದಾಂಬೆ ದೇವಾಲಯದ ಪಾರ್ಕಿಂಗ್ ಲಾಟ್‍ನ ಪಕ್ಕದಲ್ಲಿದೆ.

ದೇವರಿಗೆ ಇಟ್ಟಿದ್ದ ಹಣ ಹಾಗೂ ಫುಟ್ ಪಾತ್ ಅಂಗಡಿಗಳಲ್ಲಿ ಹಣ ಕಳ್ಳತನ ನಡೆದಿದ್ದು, ಪುಟ್ ಪಾತ್‌ನಲ್ಲಿ ಅಂಗಡಿ ಹಾಕಿರುವವರು ದುಡಿದ ಹಣವನ್ನ ಅಂಗಡಿಯಲ್ಲಿ ಇಟ್ಟು ಬೆಳಗ್ಗೆ ಪಡೆದುಕೊಳ್ತಾರೆ. ಇದೆಲ್ಲವನ್ನು ಗಮನಿಸಿದ ಯಾರೋ ತಿಳಿದವರಿಂದಲೇ ಈ ಕಳ್ಳತನ ಕೃತ್ಯ ನಡೆದಿದೆ ಎಂದು ಸ್ಥಳೀಯರು ಅನುಮಾನ ಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here