ಗಂಜಿಮಠದಲ್ಲಿ ಬಾಲ ಸಂಸ್ಕಾರ ಹಾಗೂ ಧರ್ಮ ಶಿಕ್ಷಣ ಕೇಂದ್ರ ಉದ್ಘಾಟನೆ

0
47


ಮೂಡುಬಿದಿರೆ: ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಗಂಜಿಮಠ, ಎಡಪದವು ಭಜನಾ ತಂಡದ ಪ್ರಥಮ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಬಜರಂಗದಳ ವೀರ ಶಿವಾಜಿ ಶಾಖೆ ಗಂಜಿಮಠ ಇವರ ಮುಂದಾಳತ್ವದಲ್ಲಿ ಬಾಲಸಂಸ್ಕಾರ ಹಾಗೂ ಧರ್ಮ ಶಿಕ್ಷಣ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವು ಭಾನುವಾರ ಗಂಜಿಮಠ ಜಂಕ್ಷನ್ ನಲ್ಲಿರುವ ಮರಾಠಿ ಸಮಾಜ ಸೇವಾ ಸಂಘದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಶಿವನಂದ್ ಮಂಡನ್, ಗುರುಪ್ರಸಾದ್ ಕಡಂಬಾರ್, ರಮೇಶ್ ಆಚಾರ್ಯ ನಾರಳ ಇವರುಗಳು ಶುಭಹಾರೈಸಿದರು.
ಕುಣಿತ ಭಜನಾ ಗುರುಗಳಾದ ಅಶೋಕ್ ನಾಯ್ಕ್ ಕಳಸಬೈಲು, ಭಜನಾ ಕ್ಷೇತ್ರದ ಮಾರ್ಗದರ್ಶಕರಾದ ರಿತೇಶ್ ಕಾಜಿಲ ಹಾಗೂ ತರಬೇತುದಾರ ಸಹಶಿಕ್ಷಕರಾದ ಧನ್ಯ , ಚೈತ್ರ ಕಾಜಿಲ ಇವರನ್ನು ಗೌರವಿಸಲಾಯಿತು. ಹಾಗೂ ವಿ. ಹಿ. ಪ ಬಜರಂಗದಳ ವೀರ ಶಿವಾಜಿ ಶಾಖೆ ಗಂಜಿಮಠ ಇವರಿಗೆ ಭಜನಾ ಮಂಡಳಿಯ ಪೋಷಕ ವರ್ಗ ಗೌರವ ನೀಡಲಾಯಿತು.
ಮಂಗಳೂರು ವಿಭಾಗದ ವಿ. ಹಿ.ಪ ಸಹ ಕಾರ್ಯದರ್ಶಿ ಶಿವನಂದ್ ಮೆಂಡನ್, ವಿ.ಹಿ.ಪ ಜಿಲ್ಲಾ ಸಹ ಕಾರ್ಯದರ್ಶಿ ಗುರುಪ್ರಸಾದ್ ಕಡಂಬಾರ್, ವಿ. ಹಿ. ಪ ಜಿಲ್ಲಾ ಧರ್ಮಚಾರ್ಯ ಪ್ರಮುಖ್ ಸುನಿಲ್ ಪೆರಾರ, ವಿ. ಹಿ. ಪ ಪ್ರಖಂಡ ಕಾರ್ಯದರ್ಶಿ ದಿನೇಶ್ ಮಿಜಾರ್, ಧರ್ಮ ಶಿಕ್ಷಣದ ಮುಖ್ಯ ಗುರುಗಳು ಹಾಗೂ ಶಾರದಾ ಹೈಸ್ಕೂಲಿನ ಸಂಸ್ಕೃತ ಉಪನ್ಯಾಸಕರಾದ ರಮೇಶ್ ಆಚಾರ್ಯ ನಾರಳ, ಉದ್ಯಮಿಗಳು ಮತ್ತು ಸಂಘಟನಾ ಮಾರ್ಗದರ್ಶಕರಾದ ಗಣೇಶ್ ಭಟ್ ಗಂಜಿಮಠ, ಪ್ರತಿಷ್ಠಿತ ಕುಣಿತ ಭಜನಾ ಗುರುಗಳಾದ ಅಶೋಕ್ ನಾಯ್ಕ್ ಕಳಸಬೈಲು, ಮಾರ್ಗದರ್ಶಕರಾದ ಗಿರಿಯಪ್ಪ ಸಾಲಿಯಾನ್ ಗಂಜಿಮಠ, ಅಳಿಕೆ ಫ್ರೆಂಡ್ಸ್ ಗಂಜಿಮಠ ಇದರ ಗೌರವಾಧ್ಯಕ್ಷರಾದ ಸುರೇಶ್ ಶೆಟ್ಟಿ ಅಳಿಕೆ, ಉದ್ಯಮಿ ಮತ್ತು ಮಾರ್ಗದರ್ಶಕರಾದ ರಾಜೇಂದ್ರ ಆಳ್ವ ಗಂಜಿಮಠ, ವಿ. ಹಿ. ಪ ಗಂಜಿಮಠ ಘಟಕದ ಕಾರ್ಯದರ್ಶಿಯಾದ ಚಂದ್ರಹಾಸ್ ಗಂಜಿಮಠ, ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಗಂಜಿಮಠದ ನಿರ್ವಾಹಕರುಗಳಾದÀ ಸಂಗೀತಾ ಮತ್ತು ನವೀನ್ ಈ ಸಂದರ್ಭದಲ್ಲಿದ್ದರು.
ಖುಷಿ ಅತಿಥಿಗಳನ್ನು ಸ್ವಾಗತಿಸಿ, ರಿತೇಶ್ ಕಾಜಿಲ ನಿರೂಪಿಸಿದರು.

LEAVE A REPLY

Please enter your comment!
Please enter your name here