ಬೆಂಗಳೂರು: ಕರ್ನಾಟಕ ಹೈಕೋರ್ಟ್ ದ್ವಿಚಕ್ರ ವಾಹನಗಳಲ್ಲಿ ಮಕ್ಕಳು ಹಿಂಬದಿ ಸವಾರಿ ಮಾಡುವಾಗ ಗರಿಷ್ಠ ವೇಗ ಮಿತಿಯನ್ನು ಸೂಚಿಸುವ ಕೇಂದ್ರ ಮೋಟಾರು ವಾಹನ (ಎರಡನೇ ತಿದ್ದು ಪಡಿ) ನಿಯಮಗಳು 2022 ರ ನಿಯಮ 138 (7) ರ ಅನುಷ್ಠಾನಕ್ಕೆ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ, ನಿರ್ದೇಶನ ನೀಡಿದೆ.
9 ತಿಂಗಳ ವಯಸ್ಸಿನಿಂದ ಪ್ರಾರಂಭವಾಗುವ ಮಕ್ಕಳ ಸುರಕ್ಷತಾ ಹೆಲೈಟ್‌ಗಳು ಮತ್ತು ಮಕ್ಕಳ ಸುರಕ್ಷತಾ ಸರಂಜಾಮುಗಳ ಸಮರ್ಪಕ ಲಭ್ಯತೆಗೆ ನಿರ್ದೇಶನಗಳನ್ನು ಕೋರಿ ಡಾ. ಅರ್ಚನಾ ಭಟ್ ಕೆ ಅರ್ಜಿ ಸಲ್ಲಿಸಿದ್ದು ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖು ಮತ್ತು ನ್ಯಾಯಮೂರ್ತಿಸಿ ಎಂ ಪೂಣಕ್ಕೆ ಅವರ ವಿಭಾಗೀಯ ಪೀಠವು ಕೇಂದ್ರ ಮೊಟಾರು ವಾಹನ ನಿಯಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಅಧಿಕಾರಿಗಳು ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದರೂ, ವಾಸ್ತವವಾಗಿ ಈ ನಿಯಮವನ್ನು ಇನ್ನೂ ಜಾರಿಗೆ ತಂದಿಲ್ಲ. ಈ ನಿಯಮವನ್ನು ಜಾರಿಗೆ ತರಬೇಕೆಂಬ ಯಾವುದೇ ಅನುಮಾನವಿಲ್ಲ ಎಂಬುದು ಸ್ಪಷ್ಟವಾಗಿದ್ದು ಹೀಗಾಗಿ ರಾಜ್ಯವು ಈ ನಿಯಮವನ್ನು ಜಾರಿಗೆ ತರಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯಕ್ಕೆ ನಿರ್ದೇಶಿಸುವ ಮೂಲಕ ನಾವು ಈ ಅರ್ಜಿಯನ್ನು ವಿಲೇವಾರಿ ಮಾಡಿದ್ದೇವೆ ಎಂದು ಪೀಠವು ತಿಳಿಸಿದೆ

