ಮೂಡುಬಿದಿರೆ ಸರ್ಕಾರಿ ಪ್ರೌಢಶಾಲೆ,ಅಳಿಯೂರಿನಲ್ಲಿ ಮಕ್ಕಳ ದಿನಾಚರಣೆಯನ್ನು ನವೆಂಬರ್ 14ರಂದು ಆಚರಿಸಲಾಯಿತು. ಚಿತ್ರಕಲಾ ಶಿಕ್ಷಕ ರಂಜನಾರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ರಚಿಸಿದ ಜವಾಹರಲಾಲ್ ನೆಹರೂರವರ ಕೊಲಾಜ್ ಅನಾವರಣಗೊಳಿಸಿ ಹಾಗೂ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಮೂಡುಬಿದಿರೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಉದ್ಘಾಟಿಸಿದರು. ವಿದ್ಯಾ ಟಿ ಯವರು ನೆರೆದ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಆನಂತರ ನೆರೆದ ಪೋಷಕರು ಹಾಗೂ ವಿದ್ಯಾರ್ಥಿಗಳು ಬೆಂಗಳೂರಿನಿಂದ ನೇರಪ್ರಸಾರವಾದ ಸರ್ಕಾರದಿಂದ ನಡೆಸಲಾದ ಮಕ್ಕಳ ದಿನಾಚರಣೆಯನ್ನು ವೀಕ್ಷಿಸಿದರು.
ಶಿಕ್ಷಕರಾದ ಡಾ.ಆನಿ ಡಿಂಪಲ್ ಕ್ಯಾಸ್ತಲಿನೊ ಶಾಲೆ ಹಾಗೂ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಕೊಡಮಾಡುವ ಸೌಲಭ್ಯಗಳು ಮತ್ತು ಪ್ರೋತ್ಸಾಹಕಗಳ ಸ್ಥೂಲ ಪರಿಚಯವನ್ನು ಮಾಡಿದರು. ನಶಾ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಪೋಷಕರಿಗೆ ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಿರುಚಿತ್ರ ಪ್ರದರ್ಶಿಸಲಾಯಿತು. ಘಟಕದ ಸಂಚಾಲಕರಾದ ಡಾ.ಆನಿ ಡಿಂಪಲ್ ಕ್ಯಾಸ್ತಲಿನೊ ನಶಾ ಮುಕ್ತ ಭಾರತದ ಪ್ರತಿಜ್ಞೆಯನ್ನು ಪೋಷಕರಿಗೆ ಬೋಧಿಸಿದರು. ಮುಖ್ಯ ಶಿಕ್ಷಕಿ ಪದ್ಮಿನಿ ಸ್ವಾಗತಿಸಿದರು.ವಿದ್ಯಾ ಸಂದೀಪ್ ನಾಯಕ್ ರವರು ವಂದನಾರ್ಪಣೆಗೈದರು. ಶಿಕ್ಷಕಿ ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.
.ವರದಿ ರಾಯಿ ರಾಜಕುಮಾರ

