ವೀರಕಂಭ ಗ್ರಾಮದ ಮಜಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

0
40

ಮಕ್ಕಳು ಹಿರಿಯರನ್ನು ಅನುಕರಣೆ ಮಾಡುವ ಮೂಲಕ ಕಲಿಯುತ್ತಾರೆ.. ಶಿಕ್ಷಕಿ ಸಂಗೀತ ಶರ್ಮ

ಕಲ್ಲಡ್ಕ : ಮಕ್ಕಳು ಹಿರಿಯರನ್ನು ಅನುಕರಣೆ ಮಾಡುವ ಮೂಲಕ ಕಲಿಯುತ್ತಾರೆ ಈ ಕಾರಣಕ್ಕಾಗಿ ಹಿರಿಯರ ನಡತೆಯು ಮಾದರಿಯಾಗಿರಬೇಕು, ಮಾತೃಭಾಷೆ ಹಾಗೂ ಸಂಸ್ಕಾರಯುತ ಶಿಕ್ಷಣ ಮನೆಯಲ್ಲಿ ನೀಡಿ ಬುನಾದಿ ಶಿಕ್ಷಣವನ್ನು ಒದಗಿಸಬೇಕಾಗಿದೆ ಎಂದು ಮಜಿ ಶಾಲಾ ಶಿಕ್ಷಕಿ ಶ್ರೀಮತಿ ಸಂಗೀತ ಶರ್ಮಾ ಪಿ ಜಿ ಹೇಳಿದರು. ಅವರು ನವೆಂಬರ್ 29 ನೇ ಶನಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಟ್ಲ, ಬಾಲವಿಕಾಸ ಸಮಿತಿ ಮಜಿ ಅಂಗನವಾಡಿ ಕೇಂದ್ರ, ವತಿಯಿಂದ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ಅಂಗನವಾಡಿ ಕೇಂದ್ರದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಭಾರತಿ ವಹಿಸಿದ್ದರು. ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ ಗೋಲಿಮಾರ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ನೆಹರು ರವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಶುಭ ಹಾರೈಸಿದರು. ಮಕ್ಕಳ ಪೋಷಕರು ಮಕ್ಕಳಿಗೆ ಆರತಿ ಮಾಡಿ ತಿಲಕವಿಟ್ಟು ಶುಭ ಕೋರಿದರು.
ಪುಟಾಣಿ ಮಕ್ಕಳು ಧರಿಸಿದ ಸಾಂಪ್ರದಾಯಕ ಉಡುಗೆಗಳು ಎಲ್ಲರ ಗಮನಸೆಲೆಯಿತು. ಮಕ್ಕಳ ದಿನಾಚರಣೆ ಪ್ರಯುಕ್ತ ಮಾಡಿದ ವಿವಿಧ ಸ್ಪರ್ಧೆಯ ಬಹುಮಾನಗಳನ್ನು ನೀಡಿಲಾಯಿತು. ಈ ಸಂದರ್ಭದಲ್ಲಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರಗಿತು.

ವೀರಕಂಭ ಗ್ರಾಮ , ಪಂಚಾಯತ್ ಮಾಜಿ ಅಧ್ಯಕ್ಷರಾದ ದಿನೇಶ್ ಪೂಜಾರಿ,, ಸದಸ್ಯೆರಾದ ಮೀನಾಕ್ಷಿ ಸುನೀಲ್, ಸಂಜೀವಿನಿ ಒಕ್ಕೂಟದ ಎಲ್ ಸಿ ಆರ್ ಪಿ ಗಳಾದ ಜಯಂತಿ, ರೂಪಶ್ರೀ,,ಹಿರಿಯ ನಾಗರೀಕರಾದ ಜಿನ್ನಪ್ಪ ಮೂಲ್ಯ ಮಜಿ, ಸಮಿತಿಯ ಸದಸ್ಯರಾದ ಪ್ರಕಾಶ್ ಬೆತ್ತಸರವ್,, ಚಿನ್ನಾ ಮೈರಾ, ಮೊದಲಾದವರು ಉಪಸ್ಥಿತರಿದ್ದರು. ಬಾಲವಿಕಾಸ ಸಮಿತಿ ಸದಸ್ಯರು, ಮಕ್ಕಳ ಪೋಷಕರು, ಜ್ಯೋತಿ ಲಕ್ಷ್ಮಿ ಹಾಗೂ ಶ್ರೀ ಶಾರದಾ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಸಂಜೀವಿನಿ ಒಕ್ಕೂಟದ ಸದಸ್ಯರುಗಳು ಭಾಗವಹಿಸಿದ್ದರು. ಅಂಗನವಾಡಿ ಶಿಕ್ಷಕಿ ಸುಮತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಅಂಗನವಾಡಿ ಸಹಾಯಕಿ ಮಮತ ಸಹಕರಿಸಿದರು.

LEAVE A REPLY

Please enter your comment!
Please enter your name here