ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು, ಅವರ ಕನಸುಗಳನ್ನು ನನಸಾಗಿಸುವುದು, ಪ್ರತಿಯೊಬ್ಬ ನಾಗರಿಕ ಮತ್ತು ಸರ್ಕಾರದ ಜವಾಬ್ದಾರಿಯಾಗಿದೆ ಎಂದುನಿವೃತ್ತ ಸಿ ಡಿ ಪಿ ಒ ಸುಧಾಜೋಶಿ ಹೇಳಿದರು.
ಅವರು ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ದೊಂಪದಬಲಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಗನವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷ ದೀಕ್ಷಿತ ವಹಿಸಿದ್ದರು.
ಈ ಸಂದರ್ಭದಲ್ಲಿ ಅಂಗನವಾಡಿ ಪುಟಾಣಿಗಳು ವಿವಿಧ ರಾಷ್ಟ್ರ ನಾಯಕರ ವೇಷದಲ್ಲಿ ಮಿಂಚಿದರು.
ಮಕ್ಕಳ ದಿನಾಚರಣೆ ಪ್ರಯುಕ್ತ ನಡೆಸಿದ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪಲ್ಗುಣಿ ಬ್ಯಾಂಕ್ ಅಧ್ಯಕ್ಷೆ ಗೀತಾ ಜಯತೀರ್ಥ, ವಿಜಯಲಕ್ಷ್ಮಿ ಯುವಕ ಸಂಘದ ಅಧ್ಯಕ್ಷ ಹರೀಶ್, ಕಿರಿಯ ಆರೋಗ್ಯ ಸುರಕ್ಷಣಾಧಿಕಾರಿ ರಶೀದಾ ಬಾನು,ಸಿ ಹೆಚ್ ಒ ಜ್ಯೋತಿ ಮೊಂತೆರೊ, ಪಂಚಾಯತ್ ಸದಸ್ಯರಾದ ಉಷಾಲತಾ, ಆಶಾ ಕಾರ್ಯಕರ್ತರಾದ ಅನಿತಾ, ಸಾವಿತ್ರಿ, ಪೂರ್ಣಿಮಾ, ಶೋಭಾ ಲೀಲಾವತಿ, ಪೋಷಕರಾದ ನವೀನ್, ಉಪಸ್ಥಿತರಿದ್ದರು.
ಮಕ್ಕಳ ಪೋಷಕರು, ಸ್ತ್ರೀ ಶಕ್ತಿ ಗುಂಪಿನ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಯಶೋಧ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಜಿನ್ನಮ್ಮ ಟೀಚರ್ ವಂದಿಸಿದರು, ಲಲಿತಾ ಕಾರ್ಯಕ್ರಮ ನಿರೂಪಿಸಿದರು.
ಅಂಗನವಾಡಿ ಸಹಾಯಕಿ ಚಿತ್ರಾಕ್ಷಿ ಸಹಕರಿಸಿದರು.

