ದಿನಾಂಕ 16.2.2026ರಂದು ಪೂರ್ವಾಹ್ನ 10 ಗಂಟೆಯಿಂದ 2- 00 ಗಂಟೆಯವರೆಗೆ ಕೆ.ಪಿ.ಎಸ್ ಮಿಜಾರ್ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ಮೂಡುಬಿದಿರೆ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ವಿರೂಪಾಕ್ಷಪ್ಪರವರಿಂದ ಬಾಳೆ ಹೂವನ್ನು ಅರಳಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ಈ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಆಯೋಜನೆ ಮಾಡಿದ ಬಗ್ಗೆ ಶ್ಲಾಘಿಸಿದರು . ಅಲ್ಲದೆ ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಪುಷ್ಪಾಲತಾರವರು ಹಾಗೂ ಮಾಜಿ ಅಧ್ಯಕ್ಷರಾದ ಇಕ್ಬಾಲ್ ರವರು, ಪೋಷಕ ಸಮಿತಿ ಕಾರ್ಯದರ್ಶಿ ರಮಾನಂದರವರು .ಈ ಶಾಲೆಯಲ್ಲಿ ನಿವೃತ್ತಿಗೊಂಡಿರುವ ಶಿಕ್ಷಕರಾದ ನಾಗೇಶ್ ರವರು ಭಾಗವಹಿಸಿ ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ನಾಗರತ್ನ ಶಿರೂರುರವರು ಸ್ವಾಗತಿಸಿದರು, ಶಿಕ್ಷಕಿ ಗೀತಾರವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ಪ್ರೇಮಾ ರವರು ಧನ್ಯವಾದ ನೀಡಿದರು.

ಶಿಕ್ಷಕರಾದ ಹೇಮಾವತಿ ಮತ್ತು ಚೈತ್ರಾ ಶೆಟ್ಟಿ ಹಾಗೂ ಇತರ ಎಲ್ಲಾ ಅತಿಥಿ ಶಿಕ್ಷಕರ ಸಹಕಾರದೊಂದಿಗೆ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮೂಡುಬಿದಿರೆ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುಧಾಕರ ಸಾಲ್ಯಾನ್, ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಮಹೇಶ್ವರಿ, ಬಿ.ಐ.ಆರ್.ಟಿ ಸುಶೀಲಾ, ತೆಂಕಮಿಜಾರು ಗ್ರಾಮದ ಮಾಜಿ ಅಧ್ಯಕ್ಷರಾದ ಶಾಲಿನಿ, ಪತ್ರಕರ್ತರಾದ ಪ್ರೇಮಾ ,ಕೆ.ಪಿ.ಎಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಪುಷ್ಪಾ ಹಾಗೂ ಶಿಕ್ಷಕಿ ಪವಿತ್ರರವರು ಆಗಮಿಸಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು.

15 ಕ್ಕಿಂತ ಹೆಚ್ಚಿನ ವಿವಿದ ಬಗೆಯ ವಸ್ತುಗಳು, ಬಗೆ ಬಗೆಯ ತಿಂಡಿ ತಿನಿಸುಗಳು, ತಾಜಾ ಹಣ್ಣು ತರಕಾರಿಗಳ ಮಳಿಗೆಗಳ ಮೂಲಕ ಪೋಷಕರ ಹಾಗೂ ಊರವರ ಸಹಭಾಗಿತ್ವದಿಂದ ಭರ್ಜರಿಯಾಗಿ ವ್ಯಾಪಾರ ವಹಿವಾಟು ನಡೆಸಿ ಉತ್ತಮ ಲಾಭವನ್ನು ಗಳಿಸಿದರು.

