ಬೆಂಗಳೂರು : ಕನ್ನಡ ಭಾಷೆಯ ಪ್ರಚಾರ ಮತ್ತು ವಿಸ್ತರಣೆಗೆ ಮಹತ್ವದ ಕೊಡುಗೆ ನೀಡುತ್ತಿರುವ ಕವಿತಾ ಎಸ್ ಅವರು, ವಿವಿಧ ವಯೋಮಾನದ ಅನ್ಯ ಭಾಷೆಯ ಕಲಿಕಾರ್ಥಿಗಳಿಗೆ ಉಚಿತವಾಗಿ ಆನ್‌ಲೈನ್ ಮೂಲಕ ಕನ್ನಡ ಕಲಿಸುತ್ತಿದ್ದಾರೆ. ಕನ್ನಡ ವೈಜ್ಞಾನಿಕ ಲೇಖನಕಾರರು, ಕಾರ್ಯಕ್ರಮ ನಿರೂಪಕರು (ಆಂಕರ್) ಹಾಗೂ ಕವಯಿತ್ರಿಯಾಗಿಯೂ ಗುರುತಿಸಿಕೊಂಡಿರುವ ಅವರು, ಭಾಷೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯ ಸೇವೆ ಸಲ್ಲಿಸುತ್ತಿದ್ದಾರೆ. ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಚಲನಚಿತ್ರ ನಟಿ ಪ್ರಿಯಾಂಕಾ ಉಪೇಂದ್ರ ಅವರು ಚಿತ್ರಸಂತೆ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಿದ್ದಾರೆ .

