ಚಿತ್ತೂರು: ಬಾಲಕ-ಬಾಲಕಿಯರ ಖೋಖೋ ಪಂದ್ಯದ ಉದ್ಘಾಟನೆ

0
82

ಬೈಂದೂರು ವಲಯ ಮಟ್ಟದ 17 ರ ವಯೋಮಾನದ ಬಾಲಕ ಬಾಲಕಿಯರ ಖೋ-ಖೋ ಪಂದ್ಯಾಟ ಪಿ.ಎಂ.ಶ್ರೀ ಸರಕಾರಿ ಪ್ರೌಢಶಾಲೆ ಚಿತ್ತೂರು ಇಲ್ಲಿ ನಡೆಯಿತು.

ಕೊಡುಗೈ ದಾನಿಗಳಾದ ಕೃಷ್ಣಮೂರ್ತಿ ಮಂಜರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತವೆ, ಶಿಸ್ತು, ನಾಯಕತ್ವ ಮತ್ತು ಸಮಯ ನಿರ್ವಹಣೆಯಂತಹ ಜೀವನ ಕೌಶಲ್ಯಗಳನ್ನು ಬೆಳೆಸುತ್ತವೆ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಹೆಚ್ಚಿಸುತ್ತವೆ. ಒತ್ತಡ ನಿವಾರಣೆ ಮತ್ತು ಖಿನ್ನತೆಯ ವಿರುದ್ಧ ಹೋರಾಡುವಲ್ಲಿ ಕ್ರೀಡೆಗಳು ಮುಖ್ಯ, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುತ್ತವೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಹಾಯ ಮಾಡುತ್ತವೆ ಎಂದರು.

ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧೀಕಾರಿಗಳಾದ ಚಂದ್ರಶೇಖರ ಶೆಟ್ಟಿ ಇವರು ಮಾತನಾಡಿ, ಕ್ರೀಡೆಗಳು ಕ್ರೀಡಾಪಟುಗಳಿಗೆ ನಿಯಮಗಳನ್ನು ಪಾಲಿಸುವ ಮೂಲಕ ಶಿಸ್ತನ್ನು ಕಲಿಸುತ್ತವೆ ಎಂದರು.

ಬಾಲಕ-ಬಾಲಕಿಯರ ಪಂದ್ಯಾಟದಲ್ಲಿ ಇಲ್ಲಿ ವಿಜೇತರಾದ ತಂಡಗಳು ಮುಂದಿನ ದಿನಗಳಲ್ಲಿ ಆರ್ಡಿ ಹಲ್ಬಾಡಿಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟವನ್ನು ಪ್ರತಿನಿಧಿಸಲಿದ್ದಾರೆ.

ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವಿಕೆಯು ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಜೀವನದ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದರು

ಈ ಸಂದರ್ಭದಲ್ಲಿ ಡಾ ಅತುಲ್ ಕುಮಾರ್ ಶೆಟ್ಟಿ. ಜಯರಾಮ್ ಶೆಟ್ಟಿ ವಂಡಬಳ್ಳಿ, ಉದಯ ಜಿ ಪೂಜಾರಿ ಮಾಜಿ ತಾ.ಪಂ ಸದಸ್ಯರು ಶ್ರೀಮತಿ ಸುಗುಣ, ಎಸ್. ಡಿ ಎಂ ಸಿ ಅಧ್ಯಕ್ಷರು, ವಿಜಯ್ ಕುಮಾರ್ ಶೆಟ್ಟಿ.ಚಂದ್ರಶೇಖರ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ ಮಂಜುನಾಥ ಶೆಟ್ಟಿ ರವಿಶಂಕರ್ ಹೆಗ್ಡೆ ಸಿ ಆರ್ ಪಿ.ನಾಗರಾಜ್ ಶೆಟ್ಟಿ, ನಿರ್ಮಲ ಶೆಟ್ಟಿ ಚಂದ್ರ ಶೆಟ್ಟಿ ಕೊಳೂರು, ಸುರೇಶ್ ಪೂಜಾರಿ ಚಿತ್ತೂರು, ಸುರೇಂದ್ರ ಶೆಟ್ಟಿ , ಹಳೆ ವಿದ್ಯಾರ್ಥಿಗಳು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ನಾಗರತ್ನ ಸ್ವಾಗತಿಸಿದರು ಶಿಕ್ಷಕಿ ಮೀನಾ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ರಾಘವೇಂದ್ರ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here