ವೇ.ಮೂ. ಶ್ರೀಕೃಷ್ಣ ಭಟ್ಟ ವಡ್ಯ ಮತ್ತು ವೇ.ಮೂ. ಶಂಭು ಭಟ್ಟ ಚಾವಡಿಬಾಗಿಲರವರಿಗೆ ಚೂಂತಾರು ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ಟ ಸ್ಮಾರಕ ಪ್ರಶಸ್ತಿ ಪ್ರದಾನ

0
46

ಚೊಕ್ಕಾಡಿ: ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನ (ರಿ) ಮಂಗಳೂರು ಇದರ ಆಶ್ರಯದಲ್ಲಿ ಚೂಂತಾರು ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ಟ ವೈದಿಕ ಪ್ರಶಸ್ತಿ ೨೦೨೫ ಇದನ್ನು ಅಕ್ಟೋಬರ್೧೧ ೨೦೨೫ ಶನಿವಾರದಂದು ವೇ.ಮೂ. ಶ್ರೀಕೃಷ್ಣ ಭಟ್ಟ ವಡ್ಯ ಮತ್ತು ವೇ.ಮೂ. ಶಂಭು ಭಟ್ಟ ಚಾವಡಿಬಾಗಿಲರವರಿಗೆ ಚೂಂತಾರಿನ ಉಪಾಸನಾ ಮನೆಯಲ್ಲಿ ಪ್ರದಾನಮಾಡಲಾಯಿತು.
ಹಿರಿಯರಾದ ಶ್ರೀ ಕೃಷ್ಣಮೂರ್ತಿ ನೇಣಾರು ಮತ್ತು ಶ್ರೀ ಚಂದ್ರಶೇಖರ ಕುರುಂಬುಡೇಲು ಇವರು ಪ್ರಶಸ್ತಿ ಪ್ರದಾನಗೈದು ಶುಭ ಹಾರೈಸಿದರು.

ಉಪಾಸನಾ ಮನೆಯವರಾದ ವೇ.ಮೂ. ಮಹೇಶ್ ಚೂಂತಾರು, ಡಾ. ಮುರಲೀಮೋಹನ್ ಚೂಂತಾರು ಸೇರಿದಂತೆ ಕುಟುಂಬಸ್ಥರು, ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೂಂತಾರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಗಂಗಾ ಮಹೇಶ್ ಚೂಂತಾರು ಮತ್ತು ಶ್ರೀಮತಿ
ಗೀತಾ ದೇವಿ ಸನ್ಮಾನಪತ್ರ ವಾಚಿಸಿದರು. ಶ್ರೀಗಣೇಶ ಸುಂದರ್ ವಂದನಾರ್ಪಣೆ ಗೈದರು.

ಶ್ರೀ ಶಂಭು ಭಟ್ಟ ಚಾವಡಿ ಬಾಗಿಲು ಅವರು ಮಾತನಾಡಿ ವೈದಿಕ ರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನ ಕಳೆದ ಐದು ವರುಷಗಳಿಂದ ನಿರಂತರವಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದರು.ವೈದಿಕರನ್ನು ಪ್ರೋತ್ಸಾಹಿಸುವ ಕೆಲಸ ಸಮಾಜ ಮತ್ತು ಸರ್ಕಾರ ಮಾಡಲಿ ಎಂದು ಹಕ್ಕೊತ್ತಾಯ ಮಂಡಿಸಿದರು.

LEAVE A REPLY

Please enter your comment!
Please enter your name here