ಕ್ರಿಸ್ಮಸ್–ಹೊಸ ವರ್ಷದ ಸಂಭ್ರಮಾಚರಣೆ

0
92

ಲಯನ್ಸ್ ಕ್ಲಬ್ ಸೋಮೇಶ್ವರದ ವತಿಯಿಂದ ಕ್ಲಬ್ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರ ಸಹಬಾಗಿತ್ವದಲ್ಲಿ ಕ್ರಿಸ್ಮಸ್–ಹೊಸ ವರ್ಷದ ಸಂಭ್ರಮವನ್ನು ಹರ್ಷಭರಿತ ವಾತಾವರಣದಲ್ಲಿ ನೆರವೇರಿಸಲಾಯಿತು.
ಪ್ರೀತಿ, ಏಕತೆ ಮತ್ತು ಸೇವೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲೆ 317D ಯ ಚೀಫ್ ಕೋಆರ್ಡಿನೇಟರ್ (ಕಲ್ಚರಲ್ ಪ್ರೋಗ್ರಾಂ) ಲಯನ್ ರಾಜೇಶ್ ಶೆಟ್ಟಿ ಉದ್ಘಾಟಿಸಿದರು. ಲಯನ್ ವಿಜಯನ್ ಕೆ. (ಅಧ್ಯಕ್ಷರು) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲಯನ್ ಶಶಿಕುಮಾರ್ ನಾಯರ್ ಸ್ವಾಗತ ಭಾಷಣ ಮಾಡಿದರು. ಸಹ ಕಾರ್ಯದರ್ಶಿ ಲಯನ್ ರಾಜಶ್ರೀ ನಾಯರ್ ಕ್ಲಬ್ ವರದಿ ಸಮರ್ಪಿಸಿದರು. ಖಜಾಂಜಿ ನಿತೀಶ್ ಕೃಷ್ಣ ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದ ಭಾಗವಾಗಿ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಹಾಗೂ ಮಕ್ಕಳಿಗಾಗಿ ವಿಶೇಷ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಸಾಂತಾ ಕ್ಲಾಸ್ ಅವರ ಸಾನ್ನಿಧ್ಯವು ಸಂಭ್ರಮಕ್ಕೆ ಇನ್ನಷ್ಟು ಕಳೆ ತಂದವು. ಸಭಾ ಕಾರ್ಯಕ್ರಮದ ನಂತರ ಕೇಕ್ ಕತ್ತರಿಸಿ ಉಪಹಾರ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here