ಕ್ಲಾರ್ಕ್ ಹಾಗೂ ಕ್ರಿಯೇಟ್ ಸಂಸ್ಥೆಗಳಿಂದ ಆಹಾರ, ಉತ್ಪನ್ನ, ಗ್ರಾಹಕ ಸುರಕ್ಷತೆ ಮತ್ತು ಹೊಣೆಗಾರಿಕೆಯ ಕಾರ್ಯಗಾರ

0
1

ವರದಿ ರಾಯಿ ರಾಜ ಕುಮಾರ
ಬೆಂಗಳೂರಿನ ಗ್ರಾಹಕ ಸಂಬಂಧಿಸಿದ ಸಂಸ್ಥೆಗಳಾದ ಕಾನೂನು ಸಂಶೋಧನಾ ಕೇಂದ್ರ ಹಾಗೂ ಕ್ರಿಯೇಟ್ ಸಂಸ್ಥೆಗಳು ಜಂಟಿಯಾಗಿ ಬಸವನಗುಡಿಯ ಬಿಎಂಎಸ್ ಕಾನೂನು ಕಾಲೇಜಿನಲ್ಲಿ ಆಹಾರ, ಉತ್ಪನ್ನ, ಗ್ರಾಹಕ ಸುರಕ್ಷತೆ ಮತ್ತು ಹೊಣೆಗಾರಿಕೆಯ ವಿಚಾರದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಬಿ ಎಂ ಎಸ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಡಿಜಿಟಲ್ ಜಾಹೀರಾತು, ಇತ್ಯಾದಿಗಳಲ್ಲಿ ಕಂಡುಬರುವ ಡಾರ್ಕ ಮಾದರಿಗಳ ಪರಿಚಯ ಮಾಡಿಕೊಟ್ಟು ಅವುಗಳ ಬಗ್ಗೆ ಸಾಕಷ್ಟು ಜಾಗರೂಕತೆಯನ್ನು ವಹಿಸುವಂತೆ ವಿವರಗಳನ್ನು ನೀಡಿದರು. ಡಾರ್ಕ್ ಮಾದರಿಗಳು ಗ್ರಾಹಕರನ್ನು ಮೋಸ ಮಾಡುವ ತರಹೇವಾರಿ ರೂಪಗಳನ್ನು ಹೊಂದಿದ್ದು ಎಲ್ಲವೂ ಅಪಾಯಕಾರಿ ಯಾಗಿವೆ ಎಂದು ಹಲವಾರು ಉದಾಹರಣೆಗಳನ್ನು ಪ್ರಸ್ತುತಪಡಿಸಿದ್ದರು.
ಮೈಸೂರು ರಾಮಯ್ಯ ಕಾಲೇಜಿನ ವಿದ್ಯಾರ್ಥಿಗಳು ಗ್ರಾಹಕ ಸುರಕ್ಷತೆಯ ಹಲವಾರು ಮಾಹಿತಿಗಳನ್ನು ಹಂಚಿಕೊಂಡು ಉತ್ಪನ್ನದ ಹೊಣೆಗಾರಿಕೆಯ ಅಗತ್ಯಗಳನ್ನು ತಿಳಿಸಿದರು.
ಉತ್ಪನ್ನದ ಹೊಣೆಗಾರಿಕೆಯ ಹಾಗೂ ಸುರಕ್ಷತೆಗಳ ಬಗ್ಗೆ ಕ್ರಿಯೇಟ್ ಸಂಸ್ಥೆಯ ವೈ ಜಿ ಮುರಳಿಧರ್ ಅವರು ಹಲವಾರು ಮಾಹಿತಿಗಳನ್ನು ಹಂಚಿಕೊಂಡರು. ಮಾಹಿತಿ ಆಯೋಗ ಹಾಗೂ ಮಾಹಿತಿ ಹಕ್ಕು ಅನುಷ್ಠಾನ ಸಮಿತಿಗಳ ಅಗತ್ಯ ಹಾಗೂ ರಚನೆಯ ಬಗೆಗೆ ಹಲವಾರು ಅಂಶಗಳನ್ನು ಚರ್ಚಿಸಲಾಯಿತು. ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸಲು ಬೇಕಾಗಿರುವ ಅಂಶಗಳ ಬಗ್ಗೆ ಕೂಡ ಚರ್ಚೆ ನಡೆಯಿತು.
ಕಾರ್ಯಗಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 16 ಮಂದಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದು ಚರ್ಚೆಯಲ್ಲಿ ಪಾಲ್ಗೊಂಡರು. ಕಾನೂನು ಕಾಲೇಜಿನ ಸಹ ನಿರ್ದೇಶಕಿ ಗಾಯತ್ರಿ ಬಾಯಿ ಕಾರ್ಯಕ್ರಮವನ್ನು ಸಂಘಟಿಸಿದ್ದರು.
.

LEAVE A REPLY

Please enter your comment!
Please enter your name here