ಅಳಿಕೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಉಕ್ಕುಡ ಬಸ್ ತಂಗುದಾಣದಲ್ಲಿ 22/02/2026 ರಂದು ಸ್ವಚ್ಛತಾ ಸೇವೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಸೇವೆ ಸಂಖ್ಯೆ 3ರ ಭಾಗವಾಗಿ ಈ ಕಾರ್ಯ ಕೈಗೊಳ್ಳಲಾಯಿತು.

ಘಟಕದ 12 ಮಂದಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಬಸ್ ತಂಗುದಾಣವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಸುಣ್ಣ ಬಣ್ಣ ಬಳಿದು ಸುಂದರಗೊಳಿಸಿದರು. ಸಾರ್ವಜನಿಕರಿಗೆ ಸ್ವಚ್ಛ ಹಾಗೂ ಆರಾಮದಾಯಕ ವಾತಾವರಣ ಒದಗಿಸುವ ಉದ್ದೇಶದಿಂದ ಈ ಸೇವೆಯನ್ನು ಸಮರ್ಪಿತ ಮನೋಭಾವದಿಂದ ನೆರವೇರಿಸಲಾಯಿತು.
ರಾಜೇಂದ್ರ ರೈ, ದೀಪಕ್, ಪುಟ್ಟಣ್ಣ, ರವೀಶ್, ಸರಸ್ವತಿ, ವಿನೋದ್, ಪ್ರೇಮ, ಸುರೇಶ್, ಲಕ್ಷ್ಮಣ, ಲೋಕೇಶ್, ರವಿ, ಸತೀಶ್ಈ ಕಾರ್ಯಕ್ಕೆ ಉಕ್ಕುಡ ನ್ಯೂಸ್‌ನ ರಾಜೇಶ್ ಅವರು ಸಹಕಾರ ನೀಡಿದರು.
ಅಳಿಕೆ ಘಟಕವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿದೆ.

