ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪೆರ್ನೆ ವಲಯದ ಕರುವೇಲು ಕಾರ್ಯಕ್ಷೇತ್ರದ ಸದಸ್ಯರಿಂದ ಮಕರ ಸಂಕ್ರಾಂತಿ ಪ್ರಯುಕ್ತ ಕರುವೇಲು ಶ್ರೀ ರಾಮ ಭಜನಾ ಮಂದಿರದಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರದ ಸ್ವಚ್ಛತಾ ಕಾರ್ಯಕ್ರಮ ಮತ್ತು ಶ್ರಮದಾನ ನಡೆಯಿತು.
ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷರಾದ ಸತೀಶ್ ಗೌಡ ಅಮಾಸೆ, ಒಕ್ಕೂಟದ ಉಪಾಧ್ಯಕ್ಷರಾದ ಲಲಿತಾ ಆರ್ ಬಾಣಬೆಟ್ಟು, ಸೇವಾಪ್ರತಿನಿಧಿ ರೇಷ್ಮಾ ಶೆಟ್ಟಿ, ಭಜನಾ ಮಂಡಳಿಯ ಸದಸ್ಯರು, ಶೌರ್ಯ ಘಟಕದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ಮತ್ತು ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು.


