ಶ್ರೀ ಕೃಷ್ಣ ಭಜನಾ ಮಂದಿರ ವೇದಿಕೆ ಮತ್ತು ಅದರ ಆವರಣದಲ್ಲಿ ಯುವಜನ ಸಂಯುಕ್ತ ಮಂಡಳಿಯ ಪಂಚಸಪ್ತತಿ ಉಪಕ್ರಮದ ಅಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಇಂಪೋರ್ಟ್‌ಂಟ್ FC (ರಿ.) ಗುತ್ತಿಗಾರು ವತಿಯಿಂದ ನಡೆಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಮುಳಿಯ ಸಾತ್ವಿಕ್, ಉಪಾಧ್ಯಕ್ಷರು ಕೌಶಿಕ್ ಶ್ಯಾಮ ಮತ್ತು ಶ್ರೀಶರಣ ಮೋಗ್ರಾ, ಪ್ರಧಾನ ಕಾರ್ಯದರ್ಶಿ ಅಶ್ಲೇಶ್, ಖಜಾಂಚಿ ಕಿರಣ ವಳಲಂಬೆ, ನಿರ್ದೇಶಕರು ಅಮಿತ್ ನಾಯಕ್, ಚರಣ್ ಕೊಂಬೊಟ್ಟು, ಪ್ರೀಥಂ ನರ್ನಕಾಜೆ, ಸದಸ್ಯರು ನಿಖಿಲ್, ಅನಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.


