ರಸ್ತೆ ಬದಿಯ ಸರಕಾರಿ ಜಮೀನು ಅತಿಕ್ರಮಣ ತೆರವು: PDOಗಳಿಗೆ ಹೊಸ ಜವಾಬ್ದಾರಿ

0
190

ಕರ್ನಾಟಕದಲ್ಲಿ ರಸ್ತೆ ಬದಿಯ ಸರಕಾರಿ ಜಮೀನುಗಳ ಒತ್ತುವರಿಯ ಸಮಸ್ಯೆ ದೀರ್ಘಕಾಲದಿಂದಲೂ ಚರ್ಚೆಯಲ್ಲಿದೆ. ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪು ಈ ವಿಷಯದಲ್ಲಿ ಕಾನೂನಾತ್ಮಕ ದಿಕ್ಕನ್ನು ನೀಡಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸುತ್ತೋಲೆ (RDPR/27/GPA/2025) ಮೂಲಕ ಗ್ರಾಮ ಪಂಚಾಯತ್‌ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (PDO) ಅತಿಕ್ರಮಣ ತೆರವಿನ ಸಂಪೂರ್ಣ ಜವಾಬ್ದಾರಿಯನ್ನು ವಹಿಸಲಾಗಿದೆ. ಇದರಿಂದ ಲೋಕೋಪಯೋಗಿ ಇಲಾಖೆಯ ಒತ್ತಡ ಕಡಿಮೆಯಾಗಿದ್ದು, PDOಗಳ ಕರ್ತವ್ಯ ಹೆಚ್ಚಿದೆ.

ಸಮಸ್ಯೆಯ ಹಿನ್ನೆಲೆ

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ, ರಾಷ್ಟ್ರೀಯ ಹೆದ್ದಾರಿ ,ರಾಜ್ಯದ ಹೆದ್ದಾರಿ, ಜಿಲ್ಲಾ ಮತ್ತು ಗ್ರಾಮದ ಎಲ್ಲಾ ರಸ್ತೆಯ ಬದಿಯಲ್ಲಿ ಒತ್ತುವರಿ ಮಾಡಿದ ಅನಧಿಕೃತ ಗೂಡಂಗಡಿ ಮುಂತಾದ ಸಾರ್ವಜನಿಕ ಜಾಗಗಳಲ್ಲಿ ಅನಧಿಕೃತ ಕಟ್ಟಡಗಳು, ವಾಣಿಜ್ಯ ನಿರ್ಮಾಣಗಳು ಸಾಮಾನ್ಯವಾಗಿವೆ. ಇವುಗಳ ತೆರವಿಗೆ ಜಿಲ್ಲಾಡಳಿತ, ಶಾಸಕರು ಮತ್ತು ಒತ್ತಡದ ಗುಂಪುಗಳಿಂದ ಲೋಕೋಪಯೋಗಿ ಇಲಾಖೆಗೆ ತೊಂದರೆಯಾಗಿತ್ತು. ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವುದು ಇಲಾಖೆಗೆ ಸವಾಲಾಗಿತ್ತು.

LEAVE A REPLY

Please enter your comment!
Please enter your name here