ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಬೆಳಾಲು ಕೆಸರುಗದ್ದೆ ಕ್ರೀಡಾಕೂಟದ ಸಮಾರೋಪ ಸಮಾರಂಭ

0
111

ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಬೆಳಾಲು ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುವ 15 ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅನಂತೇಶ್ವರ ಫ್ರೆಂಡ್ಸ್ ಇದರ ಅಧ್ಯಕ್ಷರಾದ ಶ್ರೀ ಸಂತೋಷ್ ನಾಯ್ಕ ಕುದ್ದoಟೆ ವಹಿಸಿದ್ದರು.ವೇದಿಕೆಯಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಚೇತನ್ ಸಾಲ್ಯಾನ್ ” ಚೇತನ್ ಕನ್ಸ್ಟ್ರಕ್ಷನ್ ” ಮಾಚಾರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬೆಳಾಲು ಇದರ ಗೌರವಾಧ್ಯಕ್ಷರಾದ ಶಿವಕುಮಾರ ಬಾರಿತ್ತಾಯ ಪಾರಲ,ಮುಖ್ಯ ತೀರ್ಪುಗಾರರಾದ ಧರ್ಮೇಂದ್ರ ಕುಮಾರ್,ಸಿಂಧೂರ ಸ್ಪೋರ್ಟ್ಸ್ ಕ್ಲಬ್ ಇದರ ಅಧ್ಯಕ್ಷರಾದ ನಿಶಾಯಶವಂತ್ ಬನಂದೂರು, ಅನಂತೇಶ್ವರ ಫ್ರೆಂಡ್ಸ್ ಇದರ ಉಪಾಧ್ಯಕ್ಷರಾದ ರೂಪೇಶ್ ಪೂಜಾರಿ ಪೋಸೊಟ್ಟು ,ಅನಂತೇಶ್ವರ ಫ್ರೆಂಡ್ಸ್ ಇದರ ಕಾರ್ಯದರ್ಶಿಯಾದ ಹರ್ಷಿತ್ ಗೌಡ ಎರ್ಧೊಟ್ಟು ಉಪಸ್ಥಿತರಿದ್ದರು. ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಗಳಾದ ಹರೀಶ್ ಗೌಡ ಆರಿಕೋಡಿ ಇವರು ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಹರಿಪ್ರಸಾದ್ ಗೌಡ ಅರಣೆಮಾರು ಸ್ವಾಗತಿಸಿ, ಗಿರೀಶ್ ಗೌಡ ಮಂಜೋತ್ತು ಕಾರ್ಯಕ್ರಮ ನಿರೂಪಿಸಿದರು. ಯಶವಂತ್ ಗೌಡ ಬನಂದೂರು ವಂದಿಸಿದರು. ನಂತರ ಕೆಸರುಗದ್ದೆಯಲ್ಲಿ ನೆಡದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ವಿಜೇತರ ಪಟ್ಟಿಯನ್ನು ಕಿರಣ್ ಸುವರ್ಣ ಇರಂತ್ಯಾರು ವಾಚಿಸಿದರು.

LEAVE A REPLY

Please enter your comment!
Please enter your name here