ಉಚಿತ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭ

0
7

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿಸಿ ಟ್ರಸ್ಟ್ (ರಿ.)ಬಂಟ್ವಾಳ ತಾಲೂಕಿನ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಮೂರು ತಿಂಗಳುಗಳ ಕಾಲ ನಡೆದ ಉಚಿತ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭವನ್ನು ಭಂಡಾರಿಬೆಟ್ಟು ವ್ಯಾಯಾಮ ಶಾಲೆಯಲ್ಲಿ ಮಾರ್ಚ್ 20 ಶುಕ್ರವಾರ ಜರಗಿತು.

ಕಾರ್ಯಕ್ರಮ ಉದ್ಘಾಟಿಸಿದ ಬಂಟ್ವಾಳ ಪುರಸಭೆಯ ನಿಕಟ ಪೂರ್ವ ಸದಸ್ಯರಾದ ಹರಿಪ್ರಸಾದ್ ಮಾತಾಡಿ ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳಾ ಜಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ನಡೆಯುವ ಕಾರ್ಯಕ್ರಮಗಳು ಉತ್ತಮ ವೇದಿಕೆ ಯಾಗಿದೆ.ಮೂರು ತಿಂಗಳುಗಳ ಕಾಲ ಉಚಿತವಾಗಿ ಪಡೆದುಕೊಂಡ ತರಬೇತಿಯಿಂದ ಸ್ವಾವಲಂಬಿಗಳಾಗಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ರೊನಾಲ್ಡ್ ವಹಿಸಿದ್ದರು
ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯನಂದ ಪಿ ಮಾತಾಡಿ ನಮ್ಮಲ್ಲಿ ಇರುವ ವಿದ್ಯೆಯನ್ನು ನಾವು ಸರಿಯಾಗಿ ಬಳಸಿದಾಗ ನಾವು ಯಶಸ್ವಿಯನ್ನು ಕಾಣಬಹುದು. ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಹಿಳೆಯರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ವಲಯ ಮೇಲ್ವಿಚಾರಕರಾದ ಗಿರೀಶ್, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸವಿತಾ, ತರಬೇತಿ ಶಿಕ್ಷಕಿ ವಸಂತಿ, ಒಕ್ಕೂಟದ ಅಧ್ಯಕ್ಷರಾದ ವಿಜಯ, ಸೇವಾ ಪ್ರತಿನಿಧಿ ವನಿತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here