ಜೀವನ ಮತ್ತು ವ್ಯಕ್ತಿತ್ವ ಎಂದರೆ ಒಬ್ಬ ವ್ಯಕ್ತಿಯ ಆಲೋಚನೆ, ಭಾವನೆ ಮತ್ತು ನಡವಳಿಕೆಯ ವಿಶಿಷ್ಟ ಮಾದರಿಗಳ ಸಂಯೋಜನೆ. ಜೀವನ ಕೌಶಲ್ಯಗಳೊಂದಿಗೆ ವ್ಯಕ್ತಿತ್ವ ವಿಕಸನವು ದೈನಂದಿನ ಜೀವನದ ಸಂಕೀರ್ಣತೆಗಳನ್ನು ನಿಭಾಯಿಸಲು ನೆರವಾಗುತ್ತದೆ . ವ್ಯಕ್ತಿತ್ವ ವಿಕಸನದಲ್ಲಿ ಸಾಧಕರ ಜೀವನವು ನಮಗೆ ಸ್ಪೂರ್ತಿ, ಮಾರ್ಗದರ್ಶನ ಮತ್ತು ಆತ್ಮವಿಶ್ವಾಸ ತುಂಬುವ ದೊಡ್ಡ ಪಾತ್ರ ವಹಿಸುತ್ತದೆ. ಅವರ ಹೋರಾಟ, ಸ್ಥಿತಿಸ್ಥಾಪಕತೆ, ನೈತಿಕತೆ ಮತ್ತು ಗುರಿ ಸಾಧನೆಯ ಪಯಣವು ನಮಗೆ ಧನಾತ್ಮಕ ಧೋರಣೆ, ಶಿಸ್ತು, ಪ್ರಾಮಾಣಿಕತೆ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ನಮ್ಮನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಉತ್ತಮ ಜೀವನ ನಡೆಸಲು ಪ್ರೇರೇಪಿಸುತ್ತದೆ,ಎಂದು ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ಅರುಣ್ ಪ್ರಕಾಶ್ ನುಡಿದರು. ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆದ ಕಲಾಸಂಘದ ಸಮಾರೋಪಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ ಎನ್.ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಲಾ ಸಂಘದ ಸಂಯೋಜಕರಾದ ಮೊನೀಷಾ ಎನ್, ಪ್ರಥಮ ಹಾಗೂ ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿಗಳು, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು. ಪ್ರಥಮ ಕಲಾವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿದ್ಯಾರ್ಥಿನಿಯರಾದ ದೀಕ್ಷಾ ಎಂ.ಬಿ ಸ್ವಾಗತಿಸಿ, ಕ್ಷಮಾ ಪಿ.ವಂದಿಸಿ, ರಕ್ಷಿತಾ ಪಿ.ಎಲ್ ಕಾರ್ಯಕ್ರಮ ನಿರೂಪಿಸಿದರು.

