ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ನಡೆದ ಆರ್ಟ್ಸ್ ಫೆಸ್ಟ್ – ಅಂತರ್‌ ಕಾಲೇಜು ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭ

0
54

೬೦ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಮೂಡುಬಿದಿರೆ ಶ್ರೀ ಮಹಾವೀರಕಾಲೇಜಿನಲ್ಲಿಐ.ಕ್ಯೂ.ಎ.ಸಿ ಮತ್ತು ಮಾನವಿಕ ಸಂಘದ ಸಹಯೋಗದಲ್ಲಿ ಪದವಿಪೂರ್ವ ಮಟ್ಟದಅಂತರ್‌ಕಾಲೇಜು ಸ್ಪರ್ಧೆ ಮಹಾವೀರಆರ್ಟ್ಸ್ಫೆಸ್ಟ್೨೦೨೫’ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ ಸಹ ಪ್ರಾಧ್ಯಾಪಕರು ಮತ್ತುಡಾ. ಪ್ರವೀಣ್‌ಕೋಚಿಂಗ್ ಸೆಂಟರ್ ಸಂಸ್ಥಾಪಕರು, ಮಂಗಳೂರು ಡಾ.ಪ್ರವೀಣ್ ಕೆ.ಇವರು“ ಆರ್ಟ್ಸ್ ವಿಭಾಗದ ವಿದ್ಯಾರ್ಥಿಗಳಲ್ಲಿರುವ ಹಿಂಜರಿಕೆಯನ್ನು ಹೋಗಲಾಡಿಸಬೇಕು, ಸಣ್ಣಯಶಸ್ಸನ್ನೂ ನೀವು ಸಂಭ್ರಮಿಸಬೇಕುಅದು ನಿಮ್ಮ ಯಶಸ್ಸಿನತ್ತ ನಡೆಯಲು ಸಹಾಯ ಮಾಡುತ್ತದೆ. ಕಲಾ ವಿಭಾಗದಲ್ಲಿಓದಿದವರುಕೂಡಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೆಚ್ಚು ಬರೆಯಿರಿ, ಸಾಮಾನ್ಯಜ್ಞಾನವನ್ನು ಹೆಚ್ಚಿಸಿಕೊಳ್ಳಿ ಹಾಗೂ ವಾರ್ತಾಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮಾತುಗಳನ್ನಾಡಿದರು.ಕಾಲೇಜಿನ ಹಳೆ ವಿದ್ಯಾರ್ಥಿನಿ, ಯುವ ಲೇಖಕಿ ಮತ್ತು ವಕ್ತಾರೆ, ರೆಶೆಲ್ ಬ್ರೆಟ್ನಿ ಫರ್ನಾಂಡಿಸ್‌ಗೌರವ ಅತಿಥಿಗಳಾಗಿ ಆಗಮಿಸಿ,ನಾನು ಈ ಕಾಲೇಜಿನ ಹಳೆ ವಿದ್ಯಾರ್ಥಿನಿಯಾಗಿದ್ದಕ್ಕೆ ಹೆಮ್ಮೆಯಿದೆ.ಅಧ್ಯಯನದಜೊತೆಗೆ ಕೆಲವು ಹವ್ಯಾಸಗಳನ್ನು ಇಟ್ಟುಕೊಳ್ಳಿ, ಜೀವನದಲ್ಲಿಗೆಲ್ಲಬೇಕಾದರೆಜೀವನದಲ್ಲಿ ಹೋರಾಟ ಮಾಡಲೇಬೇಕು.ಈ ಕಾಲೇಜಿನಲ್ಲಿ ನೀವು ಕಲಿತಿದ್ದನ್ನುಜೀವನಪೂರ್ತಿ ನಿಮ್ಮೊಂದಿಗೆತೆಗೆದುಕೊAಡು ಹೋಗಿ.ಆತ್ಮ ವಿಶ್ವಾಸ ಮತ್ತು ಶಕ್ತಿ ನಿಮ್ಮಲ್ಲಿರಲಿ ಅವು ನಿಮ್ಮನ್ನು ಯಶಸಿನತ್ತ ಮುನ್ನಡೆಸುತ್ತವೆಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಮಾತನಾಡಿ, “ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳಿವೆ ಅವುಗಳನ್ನು ವಿದ್ಯಾರ್ಥಿಗಳು ಉತ್ತಮರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು, ನಾವು ಮಾಡುವ ಕೆಲಸದಲ್ಲಿ ಬದ್ಧತೆ, ದೃಢತೆ ಹಾಗೂ ಆತ್ಮವಿಶ್ವಾಸಇದ್ದರೆಯಶಸ್ಸು ಲಭಿಸುತ್ತದೆಎಂದು ನುಡಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ, ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲೆ ಲೆಫ್ಟಿನೆಂಟ್ ವಿಜಯಲಕ್ಷಿ÷್ಮÃ, ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್, ಮಾನವಿಕ ಸಂಘದ ಸಂಯೋಜಕಿಗೀತಾರಾಮಕೃಷ್ಣ, ವಿದ್ಯಾರ್ಥಿ ನಾಯಕಿ ಸಾಕ್ಷಿ ಶೆಟ್ಟಿ, ಉಪನಾಯಕ ಮೊಹಮ್ಮದ್‌ಜುನೈದ್, ಮಾನವಿಕ ಸಂಘದ ಕಾರ್ಯದರ್ಶಿ ಸಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸ್ಪರ್ಧೆಯಲ್ಲಿಪದವಿ ಪೂರ್ವ ವಿವಿಧ ಕಾಲೇಜುಗಳ ೧೧೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಎಸ್.ಡಿ.ಎಂ ಪದವಿಪೂರ್ವಕಾಲೇಜು, ಉಜಿರೆಯವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.ಅರ್ಥಶಾಸ್ತçವಿಭಾಗದಶ್ರೀಗೌರಿ ಬಹುಮಾನ ಪಟ್ಟಿ ವಾಚಿಸಿದರು. ವಿದ್ಯಾರ್ಥಿಗಳಾದ ಮರಿಯಮ್ಮ ಸ್ವಾಗತಿಸಿ, ನೆಬಿಸತ್‌ರಿಹಾನ ವಂದಿಸಿ, ಅಶ್ವಿನಿ ನಿರೂಪಿಸಿದರು.

LEAVE A REPLY

Please enter your comment!
Please enter your name here