ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಧರ್ಮಸ್ಥಳ. ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬಂಟ್ವಾಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಬಂಟ್ವಾಳ ತಾಲ್ಲೂಕು ಇದರ ಜಂಟಿ ಆಶ್ರಯದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿಯಡಿಯಲ್ಲಿ ಯೋಜನೆ ಪಾಲುದಾರ ಬಂಧುಗಳಿಗೆ ದಿನಾಂಕ 23-02-2026 ರಿಂದ 27-02-2026 ರವರೆಗೆ ಉಚಿತವಾಗಿ ನಡೆದ 5 ದಿನಗಳ ಸಾರಿ ಫೋಲ್ಡಿಂಗ್ ಹಾಗೂ ಸಾರಿಗೊಂಡೆ ತರಬೇತಿ ಸಮಾರೋಪ ಸಮಾರಂಭ ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌದದಲ್ಲಿ ನಡೆಸಲಾಯಿತು.
ಗ್ರಾಮೀಣ ಶ್ರೇಷ್ಠತ ಕೇಂದ್ರದ ಪ್ರಾಂಶುಪಾಲರಾದ ರಮೇಶ್ ರೂಡ್ಸೆಟ್ ಸಂಸ್ಥೆಯಲ್ಲಿ ಸಿಗುವ ಉಚಿತ ತರಬೇತಿ ಬಗ್ಗೆ ಮಾಹಿತಿ ನೀಡಿ ಮಾತಾಡಿ,ಮಹಿಳೆಯರನ್ನು ಸ್ವಾವಲಂಬಿಯಾಗಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಯೋಜನೆಯ ತಂದಂತಹ ಈ ಕಾರ್ಯಕ್ರಮವು ಬಹಳ ವಿಶೇಷವಾದದ್ದು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದ ಮಹಿಳೆಯರು ಸದೃಢರಾಗಬೇಕೆ ಎಂದರು .
ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಮಾತನಾಡಿ ಯೋಜನೆಯಿಂದ ನಡೆಯುವ ಪ್ರತಿಯೊಂದು ಕಾರ್ಯಕ್ರಮವು ಸಮಾಜಕ್ಕೆ ಪೂರಕವಾಗಿರುವಂತಹದ್ದು, ಪೂಜ್ಯ ಖಾವಂದರ ಹಾಗೂ ಮಾತೃಶ್ರೀ ಅಮ್ಮನವರ ಪರಿಕಲ್ಪನೆಯಂತೆ ಮಹಿಳೆಯರು ಸ್ವ ಉದ್ಯೋಗೀಗಳಾಗಬೇಕೆಂದು ಇಂತಹ ತರಬೇತಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.ಉದ್ಯೋಗವು ಒಂದು ಕುಟುಂಬದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾದದ್ದು ಮಹಿಳೆಯರು ಸಹ ಉದ್ಯೋಗವನ್ನು ಮಾಡಿ ಕುಟುಂಬಕ್ಕೆ ಬಲವನ್ನು ತರುವಂತೆ ಕೆಲಸವನ್ನು ಮಾಡುತ್ತಿದ್ದಾರೆ ಸಿಕ್ಕಂತಹ ಈ ಅವಕಾಶವನ್ನು ಪ್ರಾಮಾಣಿಕವಾಗಿ ಬಳಸಿ ಸ್ವಾವಲಂಬಿಯಾಗಿರಿ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮೀಣ ಶ್ರೇಷ್ಠತ ಕೇಂದ್ರದ ಪ್ರಾಧ್ಯಾಪಕಿ ಧರಣಿ ಮೇಡಂ, ತರಬೇತಿ ಶಿಕ್ಷಕಿ ವಿಜಯ, ಎಮ್ ಐ ಎಸ್ ಯೋಜನಾಧಿಕಾರಿ ಪ್ರೇಮನಾಥ್,ತಾಲೂಕಿನ ಜ್ಞಾನವಿಕಾಸ ಸಮನ್ವದಿಕಾರಿ ಸವಿತಾ ಉಪಸ್ಥಿತರಿದ್ದರು.
ತರಬೇತಿ ಪಡೆದುಕೊಂಡ ಪಾಲುದಾರ ಸದಸ್ಯರಿಗೆ ತರಬೇತಿಯ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು.

