ದೇಹ ಮತ್ತು ಮನಸ್ಸುಗಳ ಜೊತೆ ಹೊಂದಾಣಿಕೆಗೆ ಯೋಗ -ಗೋಪಾಲಕೃಷ್ಣ ದೇಲಂಪಾಡಿ
ಮಂಗಳೂರು ನಗರದ ಮಂಗಳಾದೇವಿ ಸಮೀಪದಲ್ಲಿರುವ ಶ್ರೀ ರಾಮಕೃಷ್ಣ ಮಠದಲ್ಲಿ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ಮಾರ್ಗದರ್ಶನದಲ್ಲಿ ನಡೆಯುವ [ಫೆಬ್ರವರಿ ತಿಂಗಳ 2026] ಎರಡು ವಾರಗಳ ಕಾಲ ಜರುಗಿದ ಯೋಗ ಶಿಬಿರ ಸಮರೋಪಗೊಂಡಿತು. ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗವು ಮೂಲತ: ಆಧ್ಯಾತ್ಮದ ಆಧಾರದಿಂದಿರುವ/ತಳಹದಿ ಹೊಂದಿರುವ ಒಂದು ಸೂಕ್ಷ್ಮವಾದ ವಿಜ್ಞಾನದ ಶಾಖೆಯಾಗಿದ್ದು ದೇಹ ಮತ್ತು ಮನಸ್ಸುಗಳ ಜೊತೆ ಹೊಂದಾಣಿಕೆಯನ್ನು ತರಲು ಬೆಳಕು ಹರಡುವಂತದ್ದು. ಪತಂಜಲಿ ಋಷಿ ಮುನಿಗಳು ತಿಳಿಸಿದ ಯೋಗವು ಅತ್ಯತ್ತಮವಾದ ಸ್ವ ಆರೈಕೆ ಸಾಧನವಾಗಿದೆ. ಭಾರತೀಯ ಉಪಖಂಡಗಳು ಹುಟ್ಟಿಕೊಂಡ ಇದು ಮಾನವರಿಗೆ ದೈಹಿಕ ಮಾನಸಿಕ ಮತ್ತು ಆದ್ಯಾತ್ಮಿಕ ಬೆಂಬಲವನ್ನು ನೀಡಿದೆ.
ನಿಯಮಿತವಾದ ಯೋಗಾಭ್ಯಾಸ (ವ್ಯಾಯಾಮ ಕೊರತೆ ಇದ್ದಾಗ) ಪ್ರಾರಾ ಸಿಂಪಥೆಟಿಕ್ ನರಮಂಡಲದ(ವಿಶ್ರಾಂತಿಗೆ) ಪ್ರಚೋದನೆಯ ಮೂಲಕ ಕೇಂದ್ರ ನರಮಂಡಲವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ರೋಗ ಲಕ್ಷಣಗಳ ನಿಯಂತ್ರಣ, ದೇಹದಲ್ಲಿಯ ಒತ್ತಡ ಕಡಿಮೆಯಾಗುತ್ತದೆ. ಆಳವಾದ ವಿಶ್ರಾಂತಿ ದೊರಕುತ್ತದೆ. ಆಸನಗಳ ಅಭ್ಯಾಸವು ಸೆಳೆತಕ್ಕೆ ಸಂಬಂದಿಸಿದ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಅಂಗಾಂಶಗಳಿಗೆ ಆಮ್ಲಜನಕಯುಕ್ತ ರಕ್ತದ ಹರಿವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಾನಸಿಕ ಗಮನವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು. ಶಿಬಿರಾರ್ಥಿಯಾಗಿ 84 ವರ್ಷದ ಡಾ. ಜನಾರ್ಧನ ನಿವೃತ್ತ ಮಂಗಳೂರು ಯುನಿವರ್ಸಿಟಿಯ ರಿಜಿಸ್ಟಾರ್ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಶ್ರೀ ದೇಲಂಪಾಡಿ ಶಿಷ್ಯರಾದ ಸುಮಾ ಹಾಗೂ ಚಂದ್ರಹಾಸ ಬಾಳ ಇವರು ಸಹಕರಿಸಿದರು. ಯೋಗ ತರಬೇತಿ ನೀಡಿದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರನ್ನು ಶಿಬಿರಾರ್ಥಿಗಳು ಗೌರವಿಸಿದರು.

