ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಪತ್ರ: 50 ಸಾವಿರ ಸಿಲಿಂಡರ್ ಬೇಡಿಕೆ 

0
1

ಮಂಗಳೂರು: ದೇಶದಲ್ಲಿ ಸಿಲಿಂಡರ್ ಅಭಾವದ ಸರಣಿ ಸಮಸ್ಯೆ ಮುಂದುವರೆದಿದೆ. ಇತ್ತ ಕರ್ನಾಟಕದಲ್ಲೂ ಎಲ್​​​ಪಿಜಿಗಾಗಿ ಹೋಟೆಲ್ ಮಾಲೀಕರು ನಿತ್ಯ ಪರದಾಡುತ್ತಿದ್ದಾರೆ. ಒಂದ್ಕಡೆ ಗೃಹಬಳಕೆ ಸಿಲಿಂಡರ್ ಪಡೆಯಲು ಜನರು ಮುಗಿಬಿದ್ದರೆ, ಮತ್ತೊಂದ್ಕಡೆ ವಾಣಿಜ್ಯ ಸಿಲಿಂಡರ್ ಇಲ್ಲದೆ ಹಲವು ಉದ್ಯಮಗಳು ಬಂದ್ ಆಗುತ್ತಿವೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (cm Siddaramaiah) ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಪತ್ರವೊಂದನ್ನ ಬರೆದಿದ್ದರು. ಈಗ ಸಿಲಿಂಡರ್ ಸಮಸ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತೊಂದು ಪತ್ರ ಬರೆದಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್​ಗೆ ಬರೆದ ಪತ್ರದಲ್ಲಿ ರಾಜ್ಯದ ಸಿಲಿಂಡರ್​ಗಳ ಅಭಾವದ ಬಗ್ಗೆ ಉಲ್ಲೇಖಿಸಿದ್ದಾರೆ. 50 ಸಾವಿರ ಸಿಲಿಂಡರ್​ಗಳು ಬೇಕು. ಭಾರತಕ್ಕೆ ಬಂದಿರುವ ತೈಲ ಹಡಗುಗಳ ತೈಲವನ್ನ ಸಮರ್ಪಕವಾಗಿ ಹಂಚಿಕೆ ಮಾಡುವಂತೆ ಮನವಿ ಮಾಡಿದ್ದಾರೆ.

ರೆಸ್ಟೋರೆಂಟ್​ಗಳು, ಹೋಟೆಲ್​ಗಳು, ಅಡುಗೆ ತಯಾರಿಸುವ ಸಂಸ್ಥೆಗಳು ಹಾಗೂ ಪಿಜಿಗಳಲ್ಲಿ ಸಿಲಿಂಡರ್ ಅಭಾವ ಹೆಚ್ಚಾಗಿದೆ. ಹೀಗಾಗಿ 50 ಸಾವಿರ LPG ಸಿಲಿಂಡರ್​ಗಳ ಬೇಡಿಕೆಗೆ ಇದೆ. ನಾವು ದಿನಕ್ಕೆ 1000 ಸಿಲಿಂಡರ್​ಗಳನ್ನು ಮಾತ್ರ ಪೂರೈಸಲು ಸಮರ್ಥರಾಗಿದ್ದೇವೆ. ಈ ಕಾರಣಕ್ಕೆ ಹೋಟೆಲ್, ಪಿಜಿಗಳು ಮುಚ್ಚುವ ಪರಿಸ್ಥಿತಿ ಎದುರಾಗಿದೆ.

ವಿದ್ಯಾರ್ಥಿಗಳು, ಐಟಿ ನೌಕರರು, ರೈತರು, ಡೈರಿ ಉತ್ಪಾದಕರು ಸೇರಿದಂತೆ ಅನೇಕ ಜನ ಆತಿಥ್ಯ ವಲಯದ ಮೇಲೆ ಅವಲಂಬಿತರಾಗಿದ್ದಾರೆ. ಇದೇ ರೀತಿ ಎಲ್​ಪಿಜಿ ಇಲ್ಲದೇ ಆಟೋ ರೀಕ್ಷಗಳಿಗೂ ಸಂಕಷ್ಟ ಶುರುವಾಗಿದೆ. ಭಾರತ 2 ಟ್ಯಾಂಕರ್​ಗಳನ್ನ ಸ್ವೀಕರಿಸಿದೆ. ಇದು ಸಮಸ್ಯೆಗಳನ್ನ ನಿವಾರಿಸುತ್ತದೆ. ಹೀಗಾಗಿ ಕರ್ನಾಟಕಕ್ಕೆ ಸಮರ್ಪಕ ಹಂಚಿಕೆ ಮಾಡಿ. ನಮ್ಮ ಲಭ್ಯತೆ ಚಿತಪಡಿಸಿಕೊಳ್ಳಲು ನೀವು ಹಸ್ತಕ್ಷೇಪ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

LEAVE A REPLY

Please enter your comment!
Please enter your name here