ಕೊಕ್ಕೊ ಬೆಳೆ ವಿಚಾರ ವಿನಿಮಯ

0
41


ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರದಿಂದ ಕೊಕ್ಕೋ ಬೆಳೆಯಲ್ಲಿ ಸುಧಾರಿತ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.
ಸಮಾಜ ಮಂದಿರದಲ್ಲಿ ಅಕ್ಟೋಬರ್ 4 ರಂದು ನಡೆದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಕೋಲಾರದ ಡಾ. ರಶ್ಮಿ ಆರ್ ಅವರು ಮಾತನಾಡಿ ಮಳೆಯ ನೀರಿನೊಂದಿಗೆ ಕೊಚ್ಚಿ ಹೋಗುವ ಮೇಲ್ಮಣ್ಣನ್ನು ಉಳಿಸಿಕೊಂಡಲ್ಲಿ ಫಲವನ್ನು ಹೆಚ್ಚಿಸಬಹುದಾಗಿದೆ. ಕೊಕ್ಕೋ ನಾಟಿಗೆ ಕನಿಷ್ಠ 18 ಫೀಟುಗಳ ಅಂತರ ಇರತಕ್ಕದ್ದು ಅಗತ್ಯ ಇರುವ ರಸಸಾರವನ್ನು ಒದಗಿಸಿ ಬೆಳೆಯನ್ನು ಹೆಚ್ಚಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿದ ಪ್ರಭಾತ್ ಸಿಲ್ಕ್ಸ್ ಮಾಲೀಕ ಪ್ರಭಾ ಚಂದ್ರ ಜೈನ್ ಕೃಷಿಗೆ ಪ್ರಾಣಿಗಳ ಉಪಟಳ ಇದ್ದರೂ, ಉತ್ತಮ ಆರೋಗ್ಯಕ್ಕೆ ಹಟ್ಟಿ ಗೊಬ್ಬರದಿಂದ ಬೆಳೆದ ಬೆಳೆ ಹೆಚ್ಚು ಪರಿಣಾಮಕಾರಿ ಎಂದು ನೆನಪಿಸಿದರು.
ಕೃಷಿ ಕೇಂದ್ರದ ಅಧ್ಯಕ್ಷ ಅಭಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಿಜಾರುಗುತ್ತು ವಿನಯ್ ಕುಮಾರ್ ಹಾಜರಿದ್ದರು. ಮಹಾವೀರ ಮುದ್ಯ ಸ್ವಾಗತಿಸಿದರು. ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹರೀಶ್ ಕೋಟ್ಯಾನ್ ವಂದಿಸಿದರು.
.

LEAVE A REPLY

Please enter your comment!
Please enter your name here