ಯುವಕರಲ್ಲಿ ಆತ್ಮವಿಶ್ವಾಸ ಬೆಳೆಸುವ, ಹಾಗೂ ಎಲ್ಲಾ ಆಸಕ್ತರಿಗೆ ಮುಕ್ತವಾಗಿರುವ, ವಿಶಿಷ್ಟ ರೀತಿಯ ತರಬೇತಿ ವಿಶ್ವ ಕೊಂಕಣಿ ಕೇಂದ್ರದ ಸಿ.ಎ. ಪವರ್ 25 ತರಬೇತಿ. ಸೀಸನ್ -8, ಸಿ ಎ ಇಂಟರ 20 ದಿವಸಗಳ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭ ದಿ.30-03-2026 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.
ಈ ವರೆಗೆ ಹಿಂದಿನ ಸಿ.ಎ. ಇಂಟರ 7 ಸೀಸನ್ ಗಳು ಯಶಸ್ವಿಯಾಗಿದ್ದು ಉತ್ತಮ ಫಲಿತಾಂಶವನ್ನು ನೀಡಿದೆ. ಹೀಗೆಯೇ ವಿದ್ಯಾರ್ಥಿಗಳು ತಮ್ಮ ಛಲ ಸಾಧನೆಯಿಂದ ಗುರಿ ಮುಟ್ಟಲು, ಆತ್ಮವಿಶ್ವಾಸ ಹಾಗೂ ಅವಿರತ ಅಭ್ಯಾಸದಿಂದ ಮಾತ್ರ ಸಾಧ್ಯ, ಎಲ್ಲರೂ ಸಿ ಎ ಇಂಟರ್ ಪರೀಕ್ಷೆಯಲ್ಲಿ ಯಶ ಸಾಧಿಸಿ, ಸಿಎ ಅಂತಿಮ ಪರೀಕ್ಷಾ ಹಂತಕ್ಕೆ ಬರುವಂತಾಗಲಿ ಎಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ ಶೆಣೈಯವರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಚಾರ್ಟಡ್ ಅಕೌಂಟೆಂಟ್ ಆಫ್ ಇಂಡಿಯಾ (ICAI) SIRC ಕಾರ್ಯದರ್ಶಿ ಸಿ ಎ ಬಾಲಸುಬ್ರಹ್ಮಣ್ಯ ಎನ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಿಎ ಕೋರ್ಸ್ ತುಂಬಾ ಕಠಿಣಕರವಾಗಿದ್ದರೂ ಅದರ ಸತತವಾದ ಪರಿಶ್ರಮದಿಂದ, ಕೇಂದ್ರೀಕೃತ ಸಮರ್ಪಣಾ ಭಾವದಿಂದ ಸಾಧಿಸಬಹುದಾಗಿದೆ ಎಂದು ಶಿಬಿರಾರ್ಥಿಗಳಿಗೆ ಆಶೀರ್ವದಿಸಿದರು.
ತ್ರಿಶಾ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಮುಖ್ಯಸ್ಥರಾದ ಸಿ ಎ ಗೋಪಾಲಕೃಷ್ಣ ಭಟ್ ಅವರು ಸಿ.ಎ. ಇಂಟರ್ ಪರೀಕ್ಷೆಗಳನ್ನು ಎದುರಿಸಲು ಪರೀಕ್ಷಾರ್ಥಿಗಳಿಗೆ ಅವಶ್ಯಕವಾಗಿರುವ ಮನೋಸಾಮರ್ಥ್ಯಗಳ ಬಗ್ಗೆ ವಿವರಣೆ ನೀಡುತ್ತಾ ಶಿಬಿರದ ಉದ್ದೇಶವನ್ನು ತಿಳಿಸಿದರು.
ಈ ತರಬೇತಿಗೆ ಹೊರರಾಜ್ಯಗಳಿಂದ ಆಹ್ವಾನಿಸಲ್ಪಟ್ಟವರೂ ಸೇರಿ ಹಲವು ಅನುಭವೀ ಉಪನ್ಯಾಸಕರನ್ನು ಆಹ್ವಾನಿಸಲಾಗಿದ್ದು, ಉಪನ್ಯಾಸಕರಾದ ನಾಸಿಕ್ ನ ಸಿ ಎ. ದರ್ಶನ್ ಚಂದಾಲಿಯಾ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಇಂತಹ ಒಂದು ಉಪಯುಕ್ತವಾದಂತಹ ಹಾಗೂ ಸುಸಜ್ಜಿತವಾದ ಸೌಕರ್ಯಗಳೊಂದಿಗೆ ಸುವ್ಯವಸ್ಥಿತ ಮಾರ್ಗದರ್ಶನ ನೀಡುವ ಶಿಬಿರವನ್ನು ಆಯೋಜಿಸಿದ ವಿಶ್ವ ಕೊಂಕಣಿ ಕೇಂದ್ರವನ್ನು ಶ್ಲಾಘಿಸುತ್ತಾ ಎಲ್ಲರಿಗೂ ಶುಭ ಹಾರೈಸಿದರು.
ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ವಿಲಿಯಂ ಡಿಸೋಜಾ, ರಮೆಶ್ ಡಿ ನಾಯಕ್, ಟ್ರಸ್ಟಿ ಗಿಲ್ಬರ್ಟ್ ಡಿಸೋಜಾ ಹಾಗೂ ಸಿಎಒ ಡಾ ಬಿ ದೇವದಾಸ ಪೈ, ತ್ರಿಶಾ ಸಂಸ್ಥೆಯ ಪ್ರೊ ಗೌರಿ ಕಾಮತ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಳೆದ ಶಿಬಿರದಲ್ಲಿ ಭಾಗವಹಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಾನ್ನು ಈ ಸಂಧರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಯಿತು. ಈ ಉಚಿತ ಸನಿವಾಸೀ ತರಬೇತಿಯಲ್ಲಿ ಪರೀಕ್ಷಾರ್ಥಿಗಳಿಗೆ ಆಧುನಿಕ ಮಾದರಿಯಲ್ಲಿ ಸಂಪೂರ್ಣ ಪುನರಾವರ್ತನೆ ನೀಡಿ ಅಂತಿಮ ಮಟ್ಟಕ್ಕೆ ಸಿದ್ಧಗೊಳಿಸುವ ಉದ್ದೇಶ ಹೊಂದಿದೆ. ಸಿ.ಎ. ಉಲ್ಲಾಸ್ ಕಾಮತ್ ರವರ ಯು.ಕೆ. ಆಂಡ್ ಕೊ ಮತ್ತು ತ್ರಿಶಾ ಕ್ಲಾಸಸ್ ಸಂಸ್ಥೆಗಳು ವಿಶ್ವ ಕೊಂಕಣಿ ಕೇಂದ್ರದೊಂದಿಗೆ ಈ ತರಬೇತಿ ಯೋಜನೆಯ ಸಹಭಾಗಿಗಳಾಗಿರುತ್ತಾರೆ.
ದ.ಕ, ಉಡುಪಿ, ಚೆನ್ನೈ, ತುಮಕೂರು, ಗೋವಾ ಹಾಗೂ ಕೊಚ್ಚಿ ದೂರ ದೂರದ ಸ್ಥಳಗಳಿಂದ ಬಂದಿರುವ ಶಿಬಿರಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಹಾಗೂ ಆತ್ಮವಿಶ್ವಾಸದಿಂದ ಶಿಬಿರದಲ್ಲಿ ತಾವು ಪಡೆದ ಅನುಭವಗಳನ್ನು, ಹಂಚಿಕೊಂಡರು. ಶಿಬಿರಾರ್ಥಿ ಪ್ರತೀಶ್ ಕೆ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಣೆ ಗಯ್ದು ಧನ್ಯವಾದ ಸಮರ್ಪಿಸಿದರು. ನಮೃತಾ ಬಾಳಿಗಾ ಪ್ರಾರ್ಥಿಸಿದರು.

