ಬೆಂಗಳೂರು; ಮಾಧ್ಯಮ ಸಂಸ್ಥೆ ಆಯೋಜಿಸಿದ್ದ ಎಜುಕೇಶನ್ ಎಕ್ಸ್ ಪೋದಲ್ಲಿ ಸಿಬಿಎಸ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಐಶ್ವರ್ಯ ಜಿ ಗೆ ಅಭಿನಂದನೆ ಸಲ್ಲಿಸಲಾಯಿತು.
ಬನಶಂಕರಿಯ ಜಿ.ಎಸ್.ಎಸ್ ಪಬ್ಲಿಕ್ ಸ್ಕೂಲ್ ನಲ್ಲಿ ಓದುತ್ತಿರುವ ಐಶ್ವರ್ಯ ಜಿ. ಶೇ 91.6 ರಷ್ಟು ಅಂಕ ಪಡೆದು ಮಾಡಿದ ಗಣನೀಯ ಸಾಧನೆಯನ್ನು ಪರಿಗಣಿಸಿ ವಿಜಯವಾಣಿ ಡಿಜಿಟಲ್ ಸಂಪಾದಕ ಸಿದ್ದು ಕಾಳೋಜಿ ಅವರು ಪ್ರಶಸ್ತಿ ನೀಡಿ ಗೌರವಿಸಿದರು.