ಗೀತೋತ್ಸವದ ಸರ್ವಾಧ್ಯಕ್ಷರಾದ ನಗರ ಶ್ರೀನಿವಾಸ ಉಡುಪರಿಗೆ ಅಭಿನಂದನೆ

0
8

ದಾವಣಗೆರೆ-ಆಗಸ್ಟ್, ಮೈಸೂರಿನ ಕಲಾ ಮಂದಿರದಲ್ಲಿ ಇತ್ತೀಚಿಗೆ 2 ದಿನಗಳಲ್ಲಿ ನಡೆದ ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ರಾಜ್ಯ ಮಟ್ಟದ ಗೀತೋತ್ಸವದ ಸರ್ವಾಧ್ಯಕ್ಷರಾದ ಹಿರಿಯ ಗಾಯಕರಾದ ನಗರ ಶ್ರೀನಿವಾಸ ಉಡುಪರಿಗೆ ಕರ್ನಾಟಕ ಸುಗಮ ಸಂಗೀತ ಪರಿಷತ್‌ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ಅಭಿಮಾನದಿಂದ ಅಭಿನಂದಿಸಿ ಬೃಹತ್ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ರಾಜ್ಯಾಧ್ಯಕ್ಷರಾದ ವೈ.ಕೆ.ಮುದ್ದು ಕೃಷ್ಣ, ಕಾರ್ಯಾಧ್ಯಕ್ಷರಾದ ಡಾ. ಕೃಷ್ಣಮೂರ್ತಿ, ಮೈಸೂರು ಜಿಲ್ಲಾ ಘಟಕದ ಡಾ. ನಾಗರಾಜ್ ವಿ.ಬೈರಿ, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷರಾದ ಸಾಲಿಗ್ರಾಮ ಗಣೇಶ್ ಶೆಣೈ, ಹರಿಹರ ತಾಲ್ಲೂಕಿನ ಅಧ್ಯಕ್ಷರಾದ ವಿದುಷಿ ಶ್ರೀಮತಿ ಮಾಧುರಿ ಶೇಷಗಿರಿ, ವಿದುಷಿ ಶ್ರೀಮತಿ ಸಂಗೀತ ರಾಘವೇಂದ್ರ, ಪರಿಷತ್ತಿನ ಸದಸ್ಯರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ, ಶ್ರೀಮತಿ ಶಿಲ್ಪಾ ಉಮೇಶ್ ದಂಪತಿಯವರು ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here