ರಾಜ್ಯ ‘ಗಾಣಿಗ ಅಭಿವೃದ್ಧಿ ನಿಗಮ’ದ ಅಧ್ಯಕ್ಷರಾಗಿ ಸರ್ಕಾರದಿಂದ ನೇಮಕಗೊಂಡ ಯುವ ನಾಯಕ ವಿಶ್ವಾಸ್ ಕುಮಾರ್ ದಾಸ್ ಇವರನ್ನು ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಉಮೇಶ್ ಬೋಳಂತೂರು ಮತ್ತು ಸುಮಂಗಲಾ ಕ್ರೆಡಿಟ್ ಸೊಸೈಟಿ ಮಾಜಿ ನಿರ್ದೇಶಕ ಮೋಹನ್ ಕೆ. ಶ್ರೀಯಾನ್ ರಾಯಿ ಇವರು ಭಾನುವಾರ ಅಭಿನಂದಿಸಿದರು.