ಬೆಂಗಳೂರಿನಲ್ಲಿ ಪುತ್ತಿಗೆ ಶ್ರೀಗಳಿಗೆ ಅಭಿನಂದನಾ ಕಾರ್ಯಕ್ರಮ

0
12

ಪೂಜ್ಯ ಪುತ್ತಿಗೆ ಶ್ರೀಪಾದರು ಮುಂದಿನ ಶನಿವಾರದಂದು (ಫೆಬ್ರವರಿ 21 ಶನಿವಾರ ) ಬೆಂಗಳೂರು ನಗರಕ್ಕೆ ಪುರಪ್ರವೇಶ ಮಾಡುವ ಹಿನ್ನಲೆಯಲ್ಲಿ ಶ್ರೀಗಳ ಅಭಿನಂದನಾ ಸಮಾರಂಭವನ್ನು ಸ್ವಾಗತ ಸಮಿತಿ ಯವರು ಬಸವನ ಗುಡಿಯ ಗೋವರ್ಧನ ಕ್ಷೇತ್ರದಲ್ಲಿ ಹಮ್ಮಿಕೊಂಡಿರುತ್ತಾರೆ.

ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಿ. ಸಿ ಮೋಹನ್ – ಲೋಕಸಭಾ ಸದಸ್ಯರು, ಬೆಂಗಳೂರು ಕೇಂದ್ರ , ಡಾ. ಮಂಜುನಾಥ್ ಏನ್- ಲೋಕಸಭಾ ಸದಸ್ಯರು, ಬೆಂಗಳೂರು ಗ್ರಾಮೀಣ, ವಿದ್ವಾಂಸರಾದ ಡಾ ಶ್ರೀ ವ್ಯಾಸನಕೆರೆ ಪ್ರಭಂಜನಾಚಾರ್ಯ,ಬಸವನಗುಡಿಯ ಶಾಸಕ ಎಸ್, ರವಿ ಸುಬ್ರಹ್ಮಣ್ಯಂ, ಬಿಜೆಪಿ ಮುಖಂಡರಾದ, ಎನ್ ಆರ್ ರಮೇಶ್, ಅಸಗೋಡು ಜಯಸಿಂಹ, ಅಧ್ಯಕ್ಷರು- ಬ್ರಾಹ್ಮಣ ಅಭಿವೃದ್ಧಿ, ಪ್ರಾಧಿಕಾರ, ಕರ್ನಾಟಕ ಸರ್ಕಾರ, ರಘುನಾಥ್ ಎಸ್,ಅಧ್ಯಕ್ಷರು- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಡಾ. ಎಂ ಆರ್ ವಿ ಪ್ರಸಾದ್ ಅಧ್ಯಕ್ಷರು, ಬೆಂಗಳೂರು ಗಾಯನ ಸಮಾಜ , ಮಾಸ್ಟರ್ ಆನಂದ್ ಖ್ಯಾತ ಚಿತ್ರ ನಟ
ಇವರುಗಳು ಭಾಗವಹಿಸಲಿದ್ದು ಬೆಂಗಳೂರು ಪೂರ್ಣಪ್ರಜ್ಞ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ವೀರನಾರಾಯಣ ಪಾಂಡುರಂಗಿಯವರು ಶುಭಾಶಂಸನೆಗೈಯಲಿದ್ದಾರೆ.

ಸಾಯಂ 5 ಗಂಟೆಗೆ ಪೂಜ್ಯ ಶ್ರೀಗಳನ್ನು ಗುರು ನರಸಿಂಹ ಸಭಾ ಭವನದಿಂದ ಭವ್ಯ ಮೆರವಣಿಗೆಯ ಮೂಲಕ ಬಸವನಗುಡಿಯ ಶ್ರೀ ಪುತ್ತಿಗೆ ಮಠದ ಗೋವರ್ಧನ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಗುವುದು. ತದನಂತರ 7ಗಂಟೆಗೆ ಗಣ್ಯರ ಉಪಸ್ಥಿತಿಯಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ,

ಈ ಸಂದರ್ಭದಲ್ಲಿ ವಿವಿಧ ಭಜನಮಂಡಳಿಯ ಮಾತೆಯರಿಂದ ಭಗವದ್ಗೀತಾ ಪಾರಾಯಣವೂ ನಡೆಯಲಿದೆ ಮತ್ತು ಶ್ರೀಗಳಿಂದ ಭಕ್ತರಿಗೆ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷಾ ಸಮಾರಂಭವೂ ನಡೆಯಲಿದೆ
ಈ ಎಲ್ಲ ಕಾರ್ಯಕ್ರಮಗಳಲ್ಲಿ ಸದ್ಭಕ್ತರೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಮಿತಿಯ ಅಧ್ಯಕ್ಷರಾದ ಶ್ರೀರಾಮಚಂದ್ರ ಉಪಾಧ್ಯಾಯರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here