ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದೈವನತ೯ಕ ಶೇಖರ ಪರವರಿಗೆ ಪಂಜಿಕಲ್ಲು ಮನೆತನದ ಪರವಾಗಿ ಅಭಿನಂದನ ಕಾರ್ಯಕ್ರಮ

0
113

ವಿಟ್ಲ : ಬಂಟ್ವಾಳ ತಾಲೂಕು ಕೇಪು ಗ್ರಾಮದ ಪಂಜಿಕಲ್ಲು ಧರ್ಮದೈವ ಪಂಜುರ್ಲಿ, ಧೂಮಾವತಿ ಮತ್ತು ರಕ್ತೇಶ್ವರಿ ದೇವಸ್ಥಾನದ ದೈವಗಳ ನೇಮೋತ್ಸವ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದೈವನತ೯ಕ ಶೇಖರ ಪರವ ಇವರನ್ನು ಪಂಜಿಕಲ್ಲು ಶಮ೯ ಮನೆತನದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಶ್ರೀಯುತರ ಪಂಜಿಕಲ್ಲು ಮನೆತನದಲ್ಲಿ ಸುಮಾರು 23 ವರ್ಷಗಳಿಂದ ದೈವ ನತ೯ಕರಾಗಿ ಸೇವೆ ಸಲ್ಲಿಸಿರುತ್ತಾರೆ.
ಕಾರ್ಯಕ್ರಮದ ವೇದಿಕೆಯಲ್ಲಿ ಮನೆತನದ ಹಿರಿಯ ಸದಸ್ಯರಾದ ಹರಿಶರ್ಮ, ಗೋಪಾಲಕೃಷ್ಣ ಶರ್ಮ, ಗಣಪತಿ ಶರ್ಮ, ಹಾಗೂ ದಯಾನಂದ ಶರ್ಮ ಉಪಸ್ಥಿತರಿದ್ದರು.
ದೇವಾನಂದ ಶರ್ಮ ರವರು ಸ್ವಾಗತಿಸಿ, ಶಿಕ್ಷಕಿ ಸಂಗೀತ ಶರ್ಮಾ ಪಿ ಜಿ ವಂದಿಸಿದರು. ಮನೆಯವರು, ಕುಟುಂಬದ ಸದಸ್ಯರು, ಊರಿನ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here