ಕಡಬದಂತೆಯೇ ಕಿನ್ನಿಗೋಳಿಯಲ್ಲಿ ಕೂಡ ಕಾಂಗ್ರೆಸ್ ಅಧಿಕಾರ: ಮಿಥುನ್ ಎಂ ರೈ

0
1

ಕಿನ್ನಿಗೋಳಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಬಲಯುತವಾಗಿ ಹೊರಹೊಮ್ಮುತ್ತಿದೆ , ಎಂಬುದಕ್ಕೆ ಇತ್ತೀಚೆಗೆ ನಡೆದ ಕಡಬ ಪಟ್ಟಣ ಪಂಚಾಯತಿನ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಗಳಿಸಿರುವುದೇ ಸಾಕ್ಷಿಯಾಗಿದೆ .ಮುಂದಿನ ದಿನಗಳಲ್ಲಿ ಕಿನ್ನಿಗೋಳಿಯಲ್ಲಿ ಕೂಡ ಇಂತಹ ಚುನಾವಣಾ ಫಲಿತಾಂಶವನ್ನೇ ಕಾಂಗ್ರೆಸ್ ಹೈಕಮಾಂಡ್ ನಿರೀಕ್ಷೆ ಮಾಡುತ್ತಿದ್ದು ,ಈ ಬಗ್ಗೆ ಕಾರ್ಯಕರ್ತರು ಪಕ್ಷ ಸಂಘಟನೆಗೆ ಸಮಯ ನೀಡಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶ್ರಮಿಸಬೇಕಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ ರೈ ಕರೆ ನೀಡಿದರು ..

ಅವರು ಕಿನ್ನಿಗೋಳಿಯ ರಾಜರತ್ನಪುರ ಸರಫ್ ಅಣ್ಣಯ್ಯ ಆಚಾರ್ಯ ಸಭಾಭವನದಲ್ಲಿ ನಡೆದ ಕಿನ್ನಿಗೋಳಿ ಪಟ್ಟಣ ಪಂಚಾಯತಿನ 18 ವಾರ್ಡ್ ಗಳ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು .

ಪ್ರತಿ ವಾರ್ಡಿಗೂ ಪಟ್ಟಣ ಪಂಚಾಯತಿನ ಹೊರಗಿನ ನಾಯಕರುಗಳನ್ನು ಉಸ್ತುವಾರಿಯನ್ನಾಗಿ ನೇಮಿಸಿದ್ದು, ಈ ಉಸ್ತುವಾರಿಗಳು ಚುನಾವಣೆ ನಡೆದು ಕಾಂಗ್ರೆಸ್ ಪಕ್ಷ ಅಧಿಕಾರ ವಹಿಸುವವರೆಗೂ ಪ್ರತಿ ವಾರ್ಡ್ ನಲ್ಲೂ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ನ ಜಿಲ್ಲಾ ಉಸ್ತುವಾರಿಯಾದ ಕಾರ್ಪೊರೇಟರ್ ಶ್ರೀ ಅನಿಲ್ ಕುಮಾರ್ ಪೂಜಾರಿ ಮಂಗಳೂರು, ಕೆಪಿಸಿಸಿ ಸದಸ್ಯರಾದ ವಸಂತ ಬರ್ನಾಡ್ ,ಕಿನ್ನಿಗೋಳಿ ಪಟ್ಟಣ ಪಂಚಾಯತಿನ ಪ್ರಜಾಪ್ರತಿನಿಧಿ ಅಧ್ಯಕ್ಷರಾದ ಪ್ರಮೋದ್ ಕುಮಾರ್, ಅಲ್ಪಸಂಖ್ಯಾತ ಅಧ್ಯಕ್ಷರಾದ ಟಿ ಎಚ್ ಮಯ್ಯದಿ ,ಕಿನ್ನಿಗೋಳಿ ಪಟ್ಟಣ ಪಂಚಾಯತ್ ಉಸ್ತುವಾರಿ ಸುನಿಲ್ ಸಿಕ್ವೇರಾ, ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಜಾಕ್ಸನ್ ಸಲ್ದಾನ, ಕೆಮ್ರಲ್ ಮಾಜಿ ಉಪಾಧ್ಯಕ್ಷ ಸುರೇಶ್ ದೇವಾಡಿಗ ಪಂಜ ಮೊದಲಾದವರು ಇದ್ದರು .

ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್ ಕೋಟ್ಯಾನ್ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಂಬಾರ ವಂದಿಸಿದರು..

ನಾಯಕರಾದ ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಸಭೆಯ ಚರ್ಚೆಯಲ್ಲಿ ನಾಯಕರುಗಳಾದ ಜನಾರ್ಧನ ಬಂಗೇರ ,ತಿಮ್ಮಪ್ಪ ಕೋಟಿಯನ್, ನವೀನ್ ಕಟೀಲು, ಫಿಲೋಮಿನಾ. ಲೋಬೋ, ವಿಲ್ಮಾ ಡಿಕೋಸ್ಟ, ಅನಿತಾ ಅರುನ್ನ, ನಾರಾಯಣ ಶೆಟ್ಟಿ, ಚಂದ್ರಶೇಖರ ಮೊದಲಾದವರು ಭಾಗವಹಿಸಿದರು.

LEAVE A REPLY

Please enter your comment!
Please enter your name here