ಕಟಪಾಡಿ ಓವರ್​ ಪಾಸ್​ ನಿಮಾರ್ಣ ಕಾಮಗಾರಿ:ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ

0
102


ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿಯಲ್ಲಿ ವೆಹಿಕಲ್​ ಓವರ್​ ಪಾಸ್​ ನಿಮಾರ್ಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ರಾಷ್ಟ್ರೀಯ ಹೆದ್ದಾರಿಯ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ರಸ್ತೆಯ ಮೂಲಕ ವಾಹನ ಸಂಚರಿಸಲು ವ್ಯವಸ್ಥೆ ಕಲ್ಪಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶಿಸಿದ್ದಾರೆ.

ಉಡುಪಿಯಿಂದ ಮಂಗಳೂರು ಕಡೆಗೆ ಸಾಗುವ ಘನ ಹಾಗೂ ಇತರೆ ಸರಕು ಸಾಗಾಟ ವಾಹನಗಳು ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ನಿಗದಿಪಡಿಸಿದ ಟ್ರಾ$್ಯಕ್​ನಲ್ಲಿ ಸಾಗಬೇಕು. ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುವ ಘನ ಹಾಗೂ ಇತರ ಸರಕು ಸಾಗಾಟ ವಾಹನಗಳು ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ನಿಗಧಿಪಡಿಸಿದ ಟ್ರಾ$್ಯಕ್​ನಲ್ಲಿ ಸಾಗಬೇಕು.
ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುವ ಎಕ್ಸ್​ಪ್ರೆಸ್​ ಹಾಗೂ ಶಟಲ್​ ಬಸ್​ಗಳು, ಇತರ ಖಾಸಗಿ ವಾಹನಗಳು ಮತ್ತು ಸಾರ್ವಜನಿಕ ವಾಹನಗಳು ಕಲ್ಲಾಪು ಮೂಲಕ ಕಟಪಾಡಿ ಪೇಟೆಗೆ ಬಂದು ಫಾರೆಸ್ಟ್​ ಗೇಟ್​ ಮೂಲಕ ರಾಷ್ಟ್ರೀಯ ಹೆದ್ದಾರಿ 66 ಸಂಪರ್ಕಿಸಬೇಕು.

ಶಿರ್ವದಿಂದ ಉಡುಪಿ ಕಡೆಗೆ ಸಂಚರಿಸುವ ಘನ ವಾಹನಗಳು, ಟ್ರಕ್​ಗಳು ಮೂಡುಬೆಳ್ಳೆ- ದೆಂದೂರುಕಟ್ಟೆ- ಅಲೆವೂರು ಮಾರ್ಗವಾಗಿ ಉಡುಪಿಗೆ ಬರಬೇಕು. ಶಿರ್ವದಿಂದ ಉಡುಪಿ ಕಡೆಗೆ ಸಂಚರಿಸುವ ದ್ವಿಚಕ್ರ, ತ್ರಿಚಕ್ರ ಮತ್ತು ಲಘು ವಾಹನಗಳು ಕಟಪಾಡಿಯಲ್ಲಿ ಉಡುಪಿ&-ಮಂಗಳೂರು ಸರ್ವೀಸ್​ ರಸ್ತೆಯಲ್ಲಿ ಮುಂದೆ ಸಾಗಿ ರಾಷ್ಟ್ರೀಯ ಹೆದ್ದಾರಿ ಡಿವೈಡರ್​ ಮೂಲಕ ತಿರುಗಿ ಉಡುಪಿಗೆ ತೆರಳಬೇಕು. ಮಟ್ಟು ಕಡೆಯಿಂದ ಉಡುಪಿ ಕಡೆಗೆ ಸಾಗುವ ಲಘು ವಾಹನಗಳು ಕಟಪಾಡಿ ಹಳೇ ರಸ್ತೆ ಮೂಲಕ ಫಾರೆಸ್ಟ್​ ಗೇಟ್​ ಬಳಿ ತಲುಪಿ ಹೆದ್ದಾರಿಯನ್ನು ಸೇರಬೇಕು. ಮಟ್ಟು ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಲಘು ವಾಹನಗಳು ಕಟಪಾಡಿ ಹಳೇ ರಸ್ತೆ ಮೂಲಕವಾಗಿ ಫಾರೆಸ್ಟ್​ ಗೇಟ್​ ಬಳಿ ತಲುಪಿ ಮೀಡಿಯನ್​ ಮೂಲಕ ಹೆದ್ದಾರಿ ಸರ್ವೀಸ್​ ರಸ್ತೆಯನ್ನು ಸೇರಿ ಮಂಗಳೂರು ಕಡೆಗೆ ತೆರಳಬೇಕು.
ಮಂಗಳೂರು ವಿಮಾನ ನಿಲ್ದಾಣಕ್ಕೆ ತುರ್ತು ಹೋಗುವ ವಾಹನಗಳು ಕಟಪಾಡಿ ಮಾರ್ಗವನ್ನು ಹೊರತುಪಡಿಸಿ ಬೇರೆ ರಸ್ತೆಯಲ್ಲಿ ಸಾಗುವುದಕ್ಕೆ ಪ್ರಾಶಸ ನೀಡಬೇಕು.
ಕಾಮಗಾರಿ ನಡೆಯುವ ಸ್ಥಳದಿಂದ ಮಂಗಳೂರು ರಸ್ತೆ, ಉಡುಪಿ ರಸ್ತೆ, ಮಟ್ಟು ರಸ್ತೆ ಹಾಗೂ ಶಿರ್ವ ರಸ್ತೆಯಲ್ಲಿ 100 ಮೀ. ದೂರದವರೆಗೆ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here