ನಿಯಂತ್ರಿಸಿ, ತಡ ಮಾಡಬೇಡಿ: ಜೀವನೋಪಾಯ ರಕ್ಷಣೆಗೆ ಬೈಕ್ ಟ್ಯಾಕ್ಸಿ ರೈಡರ್ ಗಳ ಮನವಿ

0
35


ಬೆಂಗಳೂರು, : ಕರ್ನಾಟಕದ ಲಕ್ಷಾಂತರ ಬೈಕ್ ಟ್ಯಾಕ್ಸಿ ರೈಡರ್ ಗಳು ರಾಜ್ಯ ಸರ್ಕಾರಕ್ಕೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ (ಎಂ.ಒ.ಆರ್.ಟಿ.ಎಚ್.) ಅಗ್ರಿಗೇಟರ್ ಮಾರ್ಗಸೂಚಿ 2025 ಅಳವಡಿಸಿಕೊಂಡು ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಯಂತ್ರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸ್ಪಷ್ಟ ನೀತಿಗಳ ಕೊರತೆಯು ರೈಡರ್ ಗಳ ಜೀವನಕ್ಕೆ ಸಂಕಷ್ಟ ತಂದೊಡ್ಡಿದೆ ಮತ್ತು ಸಂಚರಿಸುವವರಿಗೆ ಕೈಗೆಟುಕುವ ಸಾರಿಗೆ ಆಯ್ಕೆಗಳಿಲ್ಲದಂತೆ ಮಾಡಿದೆ.
ಈ ಕುರಿತಾದ ಮನವಿ ಪತ್ರವನ್ನು ಕಾರ್ಮಿಕ, ಸಾರಿಗೆ, ಐಟಿ/ಬಿಟಿ, ಕೈಗಾರಿಕೆಗಳು, ಕಂದಾಯ, ಆರೋಗ್ಯ ಸಚಿವರಲ್ಲದೆ ಪ್ರತಿಪಕ್ಷದ ನಾಯಕರಿಗೂ ಸಲ್ಲಿಸಲಾಗಿದೆ. ಈ ಮನವಿಯು ಕೇಂದ್ರ ಕಾನೂನಿನಂತೆ ಬೈಕ್ ಟ್ಯಾಕ್ಸಿಗಳನ್ನು ನಿಯಂತ್ರಿಸುವ ಕಾನೂನಿನ ಸಾಧ್ಯತೆಯನ್ನು ಎತ್ತಿ ತೋರಿಸಿದ್ದು ಸಾವಿರಾರು ರೈಡರ್ ಗಳ ಜೀವನೋಪಾಯಕ್ಕೆ ಕಂಟಕವಾಗಿದೆ ಮತ್ತು ರಾಷ್ಟ್ರೀಯ ನಿರ್ದೇಶನದ ನಡುವೆಯೂ ರಾಜ್ಯಮಟ್ಟದಲ್ಲಿ ಸ್ಪಷ್ಟತೆಯ ಕೊರತೆ ಕಂಡುಬಂದಿದೆ.
ಈ ಪತ್ರದಲ್ಲಿ ಮೂರು ಪ್ರಮುಖಾಂಶಗಳನ್ನು ಎತ್ತಿ ತೋರಿಸಲಾಗಿದೆ:
• ಕಾನೂನಿನ ಸ್ಪಷ್ಟತೆ: ಎಂ.ಒ.ಆರ್.ಟಿ.ಎಚ್. ಮಾರ್ಗಸೂಚಿಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತುತ ಯೋಜನೆಯ ಅಡಿಯಲ್ಲಿ ಹಾಗೂ ಮೋಟಾರು ವಾಹನ ಕಾಯ್ದೆಯ ನಿಯಮಗಳಂತೆ ಬೈಕ್ ಟ್ಯಾಕ್ಸಿಗಳನ್ನು ನಿಯಂತ್ರಿಸಲು ಮತ್ತು ಸ್ಪಷ್ಟವಾಗಿ ಅವಕಾಶ ನೀಡುತ್ತವೆ. ಬೈಕ್ ಟ್ಯಾಕ್ಸಿ ನೀತಿಗೆ ಯಾವುದೇ ಹೊಸ ಅಥವಾ ಹೆಚ್ಚುವರಿ ತಿದ್ದುಪಡಿಗಳು ಅಗತ್ಯವಿಲ್ಲ.
• ಜೀವನೋಪಾಯಗಳು ಕಂಟಕದಲ್ಲಿವೆ: ಸಾವಿರಾರು ರೈಡರ್ ಗಳು ಅವರ ಕುಟುಂಬಗಳನ್ನು ಸಾಕಲು ಬೈಕ್ ಟ್ಯಾಕ್ಸಿಗಳ ಮೇಲೆ ಆಧಾರಪಟ್ಟಿದ್ದಾರೆ. ನಿಯಮ ರೂಪಿಸುವುದರಲ್ಲಿ ತಡವಾದರೆ ಅವರ ಜೀವನೋಪಾಯಗಳು ಸಂಕಷ್ಟಕ್ಕೆ ಸಿಲುಕುತ್ತವೆ.
• ಸಂಚಾರಿಗಳ ಅನುಕೂಲಗಳು: ಬೈಕ್ ಟ್ಯಾಕ್ಸಿಗಳು ಕೈಗೆಟುಕುವ ಮತ್ತು ಅನುಕೂಲಕರ ಕೊನೆಯ ಹಂತದ ಕನೆಕ್ಟಿವಿಟಿ ನೀಡುತ್ತಿದ್ದು ಅದು ಬೆಂಗಳೂರಿನಂತಹ ನಗರಗಳ ಹಲವು ಜನರಿಗೆ ಅಗತ್ಯವಾಗಿದೆ.
“ಕಾನೂನು ಈಗಾಗಲೇ ಬೈಕ್ ಟ್ಯಾಕ್ಸಿಗಳನ್ನು ರಾಜ್ಯದಲ್ಲಿ ನಿಯಂತ್ರಿಸಲು ಅವಕಾಶ ಕಲ್ಪಿಸಿದೆ ಮತ್ತು ಇತರೆ ರಾಜ್ಯಗಳು ಈಗಾಗಲೇ ಅದನ್ನು ಯಶಸ್ವಿಯಾಗಿ ನಿರ್ವಹಿಸಿವೆ. ನಾವು ವಿಶೇಷ ಸವಲತ್ತು ಕೇಳುತ್ತಿಲ್ಲ- ನಾವು ಕಾನೂನುಬದ್ಧವಾಗಿ ಕೆಲಸ ಮಾಡುವ ನ್ಯಾಯಯುತ ಚೌಕಟ್ಟು ಮತ್ತು ನಮ್ಮ ಕುಟುಂಬಗಳಿಗೆ ಬೆಂಬಲ ಕೇಳುತ್ತಿದ್ದೇವೆ. ಪ್ರತ ತಡವಾಗುವಿಕೆಯೂ ರೈಡರ್ ಗಳ ಜೀವನೋಪಾಯವನ್ನು ತೊಂದರೆಗೆ ಒಡ್ಡುತ್ತದೆ” ಎಂದು ಬಿಟಿಎ ಪ್ರತಿನಿಧಿಯು ಹೇಳಿದರು.
ಪತ್ರಿಕಾ ಹೇಳಿಕೆಯಲ್ಲಿ ಸಂಘಟನೆಯು ಭಾಗವಹಿಸಿದ್ದ ಮಾಧ್ಯಮ ಪ್ರತಿನಿಧಿಗಳಲ್ಲಿ ಸರ್ಕಾರದ ತುರ್ತು ಗಮನಕ್ಕೆ ಕೋರಿದರು.
“ಎಂ.ಒ.ಆರ್.ಟಿ.ಎಚ್ ಮಾರ್ಗಸೂಚಿಗಳು ಬೈಕ್ ಟ್ಯಾಕ್ಸಿಗಳನ್ನು ನಿಯಂತ್ರಿಸಲು ರಾಜ್ಯಕ್ಕೆ ಎಲ್ಲ ಸಾಧನಗಳನ್ನೂ ನೀಡಿವೆ- ಮತ್ತಷ್ಟು ತಡವಾಗುವಿಕೆಯ ಅಗತ್ಯವಿಲ್ಲ. ಸಾವಿರಾರು ರೈಡರ್ ಗಳು ಅವರ ಆದಾಯಕ್ಕೆ ಇದನ್ನೇ ನಂಬಿದ್ದಾರೆ ಮತ್ತು ಸಂಚರಿಸುವವರೂ ಕೈಗೆಟುಕುವ ಸಾರಿಗೆಗೆ ನಮ್ಮನ್ನೇ ನಂಬಿದ್ದಾರೆ. ಕರ್ನಾಟಕಕ್ಕೆ ಇದು ಕ್ರಮ ತೆಗೆದುಕೊಳ್ಳುವ ಸಮಯವಾಗಿದೆ ಜೀವನೋಪಾಯಗಳಿಗೆ ಮತ್ತು ಉತ್ತಮ ಸಾರಿಗೆ ಆಯ್ಕೆಗಳಿಗೆ ಬೆಂಬಲಿಸುವ ಸಮಯವಾಗಿದೆ” ಎಂದು ಬಿಟಿಎ ಪ್ರತಿನಿಧಿ ಹೇಳಿದರು.
ಬಿಟಿಎ ಕರ್ನಾಟಕ ಸರ್ಕಾರಕ್ಕೆ ಮುಂದೂಡಿಕೆ ಮಾಡದಿರಲು ಮತ್ತು ರೈಡರ್ ಗಳ ಮತ್ತು ಕೈಗೆಟುಕುವ, ಕೊನೆಯ ಹಂತದ ಮೊಬಿಲಿಟಿಯನ್ನು ಆಧರಿಸಿದ ಲಕ್ಷಾಂತರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿರಿಸಿಕೊಂಡು ನಿರ್ಣಾಯಕ ಹೆಜ್ಜೆಗಳನ್ನು ಇರಿಸಲು ಒತ್ತಾಯಿಸುತ್ತದೆ.

LEAVE A REPLY

Please enter your comment!
Please enter your name here