ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಿನ್ನಿಗೋಳಿ ಪರಿಸರದಲ್ಲಿನ ಸಾರ್ವಜನಿಕರಿಗೆ ಮಾರುಕಟ್ಟೆಯಲ್ಲಿ ಹಣವನ್ನು ಹೊಡಿಕೆ ಮಾಡಿ ಲಾಭಾಂಶ ನೀಡುವುದಾಗಿ ಸುಮಾರು 1.5 ಕೋಟಿ ಹಣ ಹಾಗೂ ಚಿನ್ನವನ್ನು ಪರಿಚಯಸ್ದರಿಂದ ಪಡೆದು ಹಲವರಿಗೆ ವಂಚಿಸಿದ ಬಗ್ಗೆ ಅರೋಪಿಗಳಾದ ರಿಚ್ಚರ್ಡ್ ಡಿ ಸೋಜಾ, ರಶ್ಮಿ ರೀಟಾ ಪಿಂಟೋರವರ ಮೇಲೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಠಾಣಾ ಅಕ್ರ: 145/2024 ಕಲಂ: 406,420 ಐಪಿಸಿ ಹಾಗೂ ಮುಲ್ಕಿ ಪೊಲೀಸ್ ಠಾಣಾ ಅಕ್ರ: 17/2025 ಕಲಂ: 406,420 ಐಪಿಸಿ ಯಂತೆ ಪ್ರಕರಣ ದಾಖಲಾಗಿದ್ದು , ಸದ್ರಿ ಪ್ರಕರಣದಲ್ಲಿ ಬಂಧನಕ್ಕೆ ಸಿಗದೇ ಸುಮಾರು 1 ವರೆ ವರ್ಷಗಳಿಂದ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ದಂಪತಿಗಳನ್ನು ಮುಲ್ಕಿ ಪೊಲೀಸರು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ಅರೋಪಿ ರಿಚ್ಚರ್ಡ್ ಡಿ ಸೋಜಾ, ಪ್ರಾಯ 52 ವರ್ಷ, ತಂದೆ: ಪ್ಯಾಟ್ರಿಕ್ ಡಿಸೋಜಾ, ವಾಸ: ಮನೆ ನಂಬ್ರ 2-81, ಕವತ್ತಾರು ಗುರಿ ಮನೆ, ಕವತ್ತಾರು ಅಂಚೆ ಮತ್ತು ಗ್ರಾಮ, ಮುಲ್ಕಿ ತಾಲೂಕು ಎಂಬಾತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

