ಮಣಿಪಾಲ: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಜಗದೀಶ್ ಆಚಾರ್ಯ ಮತ್ತು ಐಶ್ವರ್ಯ ದಂಪತಿಗಳು ಪ್ರಸ್ತುತ ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆಯಲ್ಲಿ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಇವರ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯಕೀಯ ವೆಚ್ಚ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕುಟುಂಬದ ಮೇಲೆ ಭಾರೀ ಆರ್ಥಿಕ ಒತ್ತಡ ಎದುರಾಗಿದೆ.
ಸ್ಥಳೀಯರು, ಬಂಧು–ಬಳಗ ಮತ್ತು ಸಮಾಜ ಸೇವಾ ಹಿತೈಷಿಗಳು ಇದೀಗ ದಂಪತಿ ಬದುಕಿಗಾಗಿ ಕೈಜೋಡಿಸುವಂತೆ ಮನವಿ ಮಾಡುತ್ತಿದ್ದಾರೆ. ಈ ಕಷ್ಟದ ಸಮಯದಲ್ಲಿ ಮಾನವೀಯತೆಯ ಹೆಸರಿನಲ್ಲಿ ಯಾರಾದರೂ ಕೈಲಾದಷ್ಟು ಆರ್ಥಿಕ ನೆರವು ನೀಡುವುದು ಅತ್ಯಂತ ಅಗತ್ಯವಾಗಿದೆ. ಈ ಬಡ ಕುಟುಂಬಕ್ಕೆ ನೆರವಾಗಲು ಮುಂದಾಗುವ ಮೂಲಕ ಇವರಿಗೆ ಸ್ವಲ್ಪ ಆದರೂ ಆಸರೆಯಾಗೋಣ.


