ಮಂಗಳೂರು :ಮಂಗಳೂರಿನ ಕೂಳೂರು ಸೇತುವೆಯ ಬಳಿಯಿಂದ ತಣ್ಣೀರು ಬಾವಿಗೆ ಹೋಗುವ ರಸ್ತೆಯಲ್ಲಿ ಅಕ್ರಮ ದನ ಸಾಗಾಟಕ್ಕೆ ಯತ್ನಿಸುತ್ತಿದ್ದ ಯುವಕರು ಪೊಲೀಸರ ಕೈ ವಶವಾಗಿರುವ ಘಟನೆ ನಿನ್ನೆ (ಏ.24) ತಡರಾತ್ರಿ ನಡೆದಿದೆ.
ಯುವಕರು ಮೂರು ದನಗಳಿಗೆ ಆಹಾರ ನೀಡುತ್ತಾ ಅದನ್ನು ಹಿಡಿದು ವಾಹನದಲ್ಲಿ ತುಂಬಿಸಿ ಸಾಗಿಸುತ್ತಿದ್ದಾಗ ಸಂಶಯಗೊಂಡ ಸ್ಥಳೀಯರು ತಡೆದು ಪ್ರಶ್ನಿಸಿದ್ದಾರೆ. ಬಳಿಕ ದನ ಸಾಗಿಸಲು ಯತ್ನಿಸುತ್ತಿದ್ದಾರೆ ಎಂದು ತಿಳಿದು, ತಡೆದು ಅವರನ್ನು ಪೊಲೀಸರಿಗೊಪ್ಪಿಸುವ ಮೂಲಕ ನಡೆಯಬಹುದಾದ ಬಹುದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ದನಗಳ ಸಮೇತ ಯುವಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲಿಸರು ತನಿಖೆ ನಡೆಸುತ್ತಿದ್ದಾರೆ.