“ಬ್ಯಾಂಕ್ ಬ್ರಾಂಚ್ ಆಡಿಟ್” ವಿಷಯದ ಮೇಲೆ ಸಿಪಿಇ (CPE) ಸೆಮಿನಾರ್

0
5

ಉಡುಪಿ ನಗರದ ಮಂಡವಿ ಟೈಮ್ಸ್ ಸ್ಕ್ವೇರ್ ಮಾಲ್‌ನಲ್ಲಿರುವ ಓಷನ್ ಪರ್‍ಲ್ ಟೈಮ್ಸ್ ಸ್ಕ್ವೇರ್ ಸಭಾಂಗಣದಲ್ಲಿ Institute of Chartered Accountants of India (ICAI) ಉಡುಪಿ ಶಾಖೆ (SIRC), ಆಡಿಟಿಂಗ್ ಮತ್ತು ಅಶ್ಯೂರನ್ಸ್ ಸ್ಟ್ಯಾಂಡರ್ಡ್ಸ್ ಬೋರ್ಡ್ (AASB) ಆಶ್ರಯದಲ್ಲಿ “ಬ್ಯಾಂಕ್ ಬ್ರಾಂಚ್ ಆಡಿಟ್” ವಿಷಯದ ಮೇಲೆ ಸಿಪಿಇ (CPE) ಸೆಮಿನಾರ್ ದಿನಾಂಕ 17 ಮಾರ್ಚ್ 2026, ಮಂಗಳವಾರ ರಂದು ಅನ್ನು ಆಯೋಜಿಸಲಾಯಿತು.

ಸೆಮಿನಾರಿನಲ್ಲಿ ಪ್ರಮುಖ ವಕ್ತಾರರಾಗಿ:

ಸಿಎ. ಪಿ.ಆರ್. ಸುರೇಶ್ ಅವರು ಬ್ಯಾಂಕ್ ಆಡಿಟರ್‌ಗಳಿಗೆ ಸಂಬಂಧಿಸಿದ IRAC ನಿಯಮಗಳು ಹಾಗೂ LFAR ವರದಿ ಕುರಿತ ಪ್ರಾಯೋಗಿಕ ವಿಧಾನಗಳನ್ನು ವಿವರಿಸಿದರು.

ಸಿಎ. ಉಪ್ಪಲಪಾಟಿ ಸರಣ್ ಕುಮಾರ್ ಅವರು ಬ್ಯಾಂಕ್ ಬ್ರಾಂಚ್ ಆಡಿಟ್‌ನಲ್ಲಿ ತಂತ್ರಜ್ಞಾನ, ಎಕ್ಸೆಲ್ ಮತ್ತು ಆಡಿಟ್ ಉಪಕರಣಗಳ ಪರಿಣಾಮಕಾರಿ ಬಳಕೆ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೂನಿಯನ್ ಬ್ಯಾಂಕ್‌ನ ಪ್ರಧಾನ ಅಧಿಕಾರಿ ಶ್ರೀ ಅಶೋಕ್ ಕುಮಾರ್ ವಹಿಸಿದರು.

ಉಡುಪಿ ಶಾಖೆಯ ಅಧ್ಯಕ್ಷರಾದ ಸಿಎ. ಎಂ. ರಾಘವೇಂದ್ರ ಮೊಗರಾಯ, ಹಿಂದಿನ ಅಧ್ಯಕ್ಷರು ಹಾಗೂ ಖಜಾಂಚಿಯಾದ ಸಿಎ. ಅರ್ಚನಾ ಆರ್. ಮೈಯ್ಯ, ಸದಸ್ಯರಾದ ಸಿಎ. ಸೋನಿತ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಸಿಎ. ಕೆ. ಲಕ್ಷ್ಮೀಶ ರಾವ್ ಕಾರ್ಯಕ್ರಮವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here