ಸಂಸ್ಕಾರಯುತ, ವಿದ್ಯೆ, ಬುದ್ಧಿ, ಸುಲಲಿತ ಕಠಿಣ ದುಡಿಮೆ ಸಾಧನೆಗೆ ದಾರಿ-ಜಸ್ಟೀಸ್ ಎಸ್.ಅಬ್ದುಲ್ ನಜೀರ್

0
115

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

ಮೂಡುಬಿದಿರೆ: ಶಿಕ್ಷಣ ಸತ್ಯದ ಮಾರ್ಗವನ್ನು ತೋರುತ್ತದೆ. ಸಂಸ್ಕಾರ, ವಿದ್ಯೆ, ಬುದ್ಧಿ, ಗಳಿಂದ ಕಠಿಣ ದುಡಿಮೆಯೊಂದಿಗೆ ಸುಲಭವಾಗಿ ಕಾರ್ಯ ಮಾಡಿದರೆ ಏನನ್ನೂ ಸಾಧಿಸಲು ಸಾಧ್ಯ ಎಂದು ಆಂಧ್ರಪ್ರದೇಶದ ರಾಜ್ಯಪಾಲ, ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎಸ್ ಅಬ್ದುಲ್ ನಜೀರ್ ವಿದ್ಯಾರ್ಥಿಗಳಿಗೆ ಪ್ರೇರಣೆಯ ಮಾತುಗಳನ್ನು ನುಡಿದರು. ಅವರು ಆಗಸ್ಟ್ 30 ರಂದು ಮೂಡುಬಿದಿರೆ ಬನ್ನಡ್ಕದ ವಿಶ್ವವಿದ್ಯಾಲಯ ಘಟಕ ಕಾಲೇಜಿನ ಪ್ರೇರಣಾ ದಿವಸ ಕಾರ್ಯಕ್ರಮದಲ್ಲಿ ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದರು. ಅವರು ಅಬ್ರಹಾಂ ಲಿಂಕನ್, ಸ್ಟಾಲಿನ್, ಅಬ್ದುಲ್ ಕಲಾಂ, ಕೆ ಆರ್ ನಾರಾಯಣನ್, ಮಹಾತ್ಮ ಗಾಂಧೀಜಿ, ನರೇಂದ್ರ ಮೋದಿ ಎಲ್ಲರ ಆತ್ಮ ಚರಿತ್ರೆಯು ಇದನ್ನೇ ಸಾರುತ್ತದೆ ಎಂದರು. ಆದುದರಿಂದ ಸಾಧಿಸುವ ಛಲ ದೊಂದಿಗೆ ಸೋತರೂ ಎದೆಗುಂದದೆ ಮುಂದುವರಿಯುವುದು ಸಾಧನೆಗೆ ರಹದಾರಿ ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಪತ್ನಿ ಸಮೀದಾ ನಜೀರ್ ಜತೆಗಿದ್ದರು. ಬಿ ಎ, ಬಿಕಾಂ, ಬಿಸಿಎ ಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ ಸರ್ಕಾರದ ನಿಯಮದಂತೆ ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆರ್.ಟಿ.ಇ. ಪ್ರಕಾರ ಶಿಕ್ಷಣದಲ್ಲಿ ಸಾಧನೆ ಗೈದು ವಿದ್ಯಾರ್ಥಿಗಳು ಗುರಿ ಮುಟ್ಟಿ ಬಾಳನ್ನು ಬೆಳಗಲು ಆಶಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಮಾತನಾಡಿ ಸರಿಯಾದ ಕಟ್ಟಡ ಇಲ್ಲದ, ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ನಾನು ಶಾಲೆ ಮುಚ್ಚುವಲ್ಲಿ ಆಸಕ್ತಿ ಹೊಂದಿಲ್ಲ. ಆದರೆ ಸರಕಾರದ ನಿಯಮವನ್ನು ಮೀರಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಸತ್ಯವನ್ನು ಸಾದರ ಪಡಿಸಿದರು.
ಬಡ ಹಾಗೂ ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ವಿವಿಧ ಮೂಲಗಳಿಂದ ಹಣವನ್ನು ತಂದು ಕಾಲೇಜನ್ನು ಸಲಹಲಾಗುತ್ತಿದೆ. ತಾಂತ್ರಿಕ ಶಿಕ್ಷಣಕ್ಕೂ ಬೇಕಿರುವಷ್ಟು ವಿವಿಧ ಸಲಕರಣೆಗಳು ತುಕ್ಕು ಹಿಡಿಯುತ್ತಿದೆ. ಅದರ ಸದುಪಯೋಗ ಆಗಬೇಕಾಗಿದೆ. ಅದೇ ರೀತಿ ವಿಶ್ವವಿದ್ಯಾಲಯ ಕಾಲೇಜು ಸರಕಾರಿ ಕಾಲೇಜ್ ಆಗಿ ಪರಿವರ್ತನೆಯಾಗಲು ಎಲ್ಲ ರೀತಿಯ ಸಹಕಾರವನ್ನು ನೀಡಬೇಕೆಂದು ವೇದಿಕೆಯಲ್ಲಿದ್ದವರನ್ನು ಕೇಳಿಕೊಂಡರು ಶಾಸಕ ಉಮಾನಾಥ ಕೋಟ್ಯಾನ್ . ಮಾಜಿ ಸಚಿವ ಅಭಯ್ ಚಂದ್ರ ಜೈನ್, ಎಂ ಸಿ ಎಸ್ ಸೊಸೈಟಿಯ ಅಧ್ಯಕ್ಷ ಬಾಹುಬಲಿ ಪ್ರಸಾದ್ ಆದಷ್ಟು ಶೀಘ್ರ ಸರಕಾರಿ ಕಾಲೇಜಾಗಿ ಎಲ್ಲರ ಉಪಯೋಗಕ್ಕೆ ದೊರಕಲಿ ಎಂದು ಹಾರೈಸಿದರು.
ಕಾಲೇಜಿನ ಸಂಯೋಜಕ ಪ್ರೊ. ಕುಮಾರ ಸುಬ್ರಹ್ಮಣ್ಯ ಸ್ವಾಗತಿಸಿದರು. ಪ್ರೊ. ಆಶಾ ಶಾಲೆಟ್ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ಸುಧಾಕರ ವಂದಿಸಿದರು.

LEAVE A REPLY

Please enter your comment!
Please enter your name here