ದಿನಾಂಕ 2-6-2025ರ ಸೋಮವಾರದಂದು ಅಮೃತ ಭಾರತಿ ವಿದ್ಯಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ಶುಭ ತಿಲಕವಿತ್ತು ಶಾಲಾ ಪ್ರಾರಂಭೋತ್ಸವವನ್ನು ಅದ್ದೂರಿಯಾಗಿ ನಡೆಸಲಾಯಿತು. ಅಮೃತ ಭಾರತಿ ಟ್ರಸ್ಟ್ ಪದಾಧಿಕಾರಿಗಳು ಮಾತೆ ಸರಸ್ವತಿಗೆ, ತಾಯಿ ಭಾರತಿಗೆ ಪುಷ್ಪಾರ್ಚನೆಗೈದು ದೀಪ ಪ್ರಜ್ವಲಿಸಿದರು .ಶಾಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಅಮೃತ ಭಾರತಿ ಟ್ರಸ್ಟಿನ ಟ್ರಸ್ಟಿಗಳಾದ ಶ್ರೀಯುತ ಬಾಲಕೃಷ್ಣ ಮಲ್ಯರು ಶಿಕ್ಷಣದೊಂದಿಗಿನ ಸಂಸ್ಕಾರ ಸದಾ ಅಗತ್ಯವೆಂದರು .ಟ್ರಸ್ಟಿಗಳಾದ ಭಾಸ್ಕರ ಜೋಯಿಸರು “ಸಾಧನೆಯ ಸಮಯದಲ್ಲಿ ಸ್ಥಿರತೆ ಇರಲಿ “ಎಂದರು. ಅಮೃತ ಭಾರತಿಯ ಸ್ಥಾಪಕ ಅಧ್ಯಕ್ಷರಾದ ಸತೀಶ್ ಫೈ,ಸುಧೀರ್ ನಾಯಕ್ “ಪರಿಶ್ರಮದಿಂದಲೇ ಸಾಧನೆ ಸಾಧ್ಯ”.” ಜೀವನದ ಪರೀಕ್ಷೆಯಲ್ಲಿ ಸೋಲದಿರಿ” ಎಂದರು. ಟ್ರಸ್ಟಿಗಳಾದ ವಿಷ್ಣುಮೂರ್ತಿ ನಾಯಕರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅಮೃತ ಭಾರತಿ ವಿದ್ಯಾ ಕೇಂದ್ರದ ಅಧ್ಯಕ್ಷರಾದ ಶ್ರೀಯುತ ಗುರುದಾಸ್ ಶೆಣೈ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ,”ನಿಮ್ಮ ವಿದ್ಯಾ ಸಾಧನೆಯ ಹಿಂದೆ ಪೋಷಕರ ಪರಿಶ್ರಮವಿದೆ” ಎಂದು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ನೆನಪಿಸಿದರು .ಅಮೃತ ಭಾರತಿ ವಿದ್ಯಾಲಯದ ಅಧ್ಯಕ್ಷರಾದ ಶೈಲೇಶ್ ಕಿಣಿರವರು ವಿದ್ಯಾರ್ಥಿಗಳಿಗೆ “ಕೇವಲ ಓದು ಅಲ್ಲ ಅದರೊಂದಿಗೆ ಸಜ್ಜನಿಕೆ ಸರಳತೆಯನ್ನು ಮೈಗೂಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಅರುಣ್ ರವರು ಪ್ರಾಸ್ತಾವಿಕ ಮಾತುಗಳೊಂದಿಗೆ ಪುಟಾಣಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಅನಿತಾ ಉಪಸ್ಥಿತರಿದ್ದರು. ಸಂಸ್ಥೆಯ ಶಿಕ್ಷಕಿ ಪ್ರೀತಿ ಬಿ.ಕೆ ಕಾರ್ಯಕ್ರಮವನ್ನು ನಿರೂಪಿಸಿದರು . ಶಿಕ್ಷಕಿ ಶ್ರೀಮತಿ ಅಕ್ಷತ ಗಣ್ಯರನ್ನು ವಂದಿಸಿದರು.