ಸಿಲಿಂಡರ್‌ ಬುಕಿಂಗ್‌ ಸಂಪರ್ಕ ಸಂಖ್ಯೆ ಬದಲು

0
116

LPG ವಿತರಕರ ಸಂಘದ ಅಧ್ಯಕ್ಷ ಮೆಹುಲ್

ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ ಬುಕಿಂಗ್‌ನಲ್ಲಿ ವೇಗ ಕಾಯ್ದುಕೊಳ್ಳಲು ಭಾರತ್‌, ಇಂಡೇನ್‌ ಮತ್ತು ಎಚ್‌ಪಿ ಅನಿಲ ಸರಬರಾಜು ಕಂಪನಿಗಳ ಬುಕಿಂಗ್ ಸಂಖ್ಯೆ, ವಾಟ್ಸ್‌ಆಯಪ್ ಸಂಖ್ಯೆ ಬದಲಾಗಿದ್ದು, ಗ್ರಾಹಕರು ಇದನ್ನು ಬಳಸಿ ಸಹಕರಿಸಬೇಕು’ ಎಂದು ರಾಜ್ಯ ಎಲ್‌ಪಿಜಿ ವಿತರಕರ ಸಂಘದ ಅಧ್ಯಕ್ಷ ಮೆಹುಲ್ ಜೆ.ಪಟೇಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊಲ್ಲಿ ದೇಶಗಳಲ್ಲಿ ಯುದ್ಧದ ಕಾರಣ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬ ಆತಂಕದಲ್ಲಿ ಜನರು ಅಗತ್ಯವಿಲ್ಲದಿದ್ದರೂ ಸಿಲಿಂಡರ್‌ಗಳ ಮುಂಗಡ ಬುಕಿಂಗ್‌ಗೆ ಮುಂದಾಗುತ್ತಿದ್ದಾರೆ. ಇದರಿಂದ ಕೇಂದ್ರದ ಸರ್ವರ್‌ಗಳಲ್ಲಿ ಸಮಸ್ಯೆ ಎದುರಾಗಿತ್ತು, ಜನರು ಆತಂಕಗೊಂಡಿದ್ದರು. ಆದರೆ, ಇದಕ್ಕೂ ವಿತರಕರಿಗೂ ಸಂಬಂಧವಿಲ್ಲ. ಸಿಲಿಂಡರ್‌ ಲಭ್ಯತೆಯಲ್ಲಿ ವ್ಯತ್ಯಯವಾಗಿದ್ದರೂ ಸರಿ ಹೋಗಲಿದೆ. ಹೊಸ ನಂಬರ್‌ಗಳು ಸಮರ್ಪಕ ಬುಕಿಂಗ್‌ಗೆ ಸಹಕರಿಸಲಿದೆ’ ಎಂದರು.

‘ಭಾರತ್ ಗ್ಯಾಸ್ ವಾಟ್ಸ್‌ಆಯಪ್ ಸಂಖ್ಯೆ 1800224344, ಐವಿಆರ್‌ಎಸ್ 7715012345, ಇಂಡೇನ್‌- ವಾಟ್ಸ್‌ಆಯಪ್ ಸಂಖ್ಯೆ 75888 88824, ಐವಿಆರ್‌ಎಸ್ 77189 55555, ಎಚ್‌ಪಿ ಗ್ಯಾಸ್‌-ವಾಟ್ಸ್‌ಆಯಪ್ ಸಂಖ್ಯೆ 92222 01122, ‌ಐವಿಆರ್‌ಎಸ್ 88888 23456ಗೆ ಬದಲಾಗಿದೆ.

ಗೃಹ ಬಳಕೆದಾರರು ಒಂದು ಸಿಲಿಂಡರ್‌ನವರಾಗಿದ್ದರೆ 25 ದಿನಗಳ ಅಂತರದಲ್ಲಿ, ಎರಡು ಸಿಲಿಂಡರ್‌ನವರಾಗಿದ್ದರೆ 30 ದಿನಗಳ ಅಂತರ, ಗ್ರಾಮೀಣ ಪ್ರದೇಶದಲ್ಲಿ 40 ದಿನಗಳ ಅಂತರದಲ್ಲಿ ನೋಂದಾಯಿತ ಮೊ.ಸಂ. ಬಳಸಿ ಬುಕ್‌ ಮಾಡಬೇಕು. ಹೋಟೆಲ್ ಮೊದಲಾದವುಗಳಿಗೆ ಶೀಘ್ರದಲ್ಲೇ ಸಮರ್ಪಕ ಪೂರೈಕೆ ಆಗಲಿದೆ’ ಎಂದು ಭರವಸೆ ನೀಡಿದರು.

LEAVE A REPLY

Please enter your comment!
Please enter your name here