ಶ್ರೀ ಕಮಲ ಪ್ರಸಾದ್ ಅಸ್ರಣ್ಣರು ಕಟೀಲು ಇವರ ಶುಭಾಶೀರ್ವಾದದೊಂದಿಗೆ ಶ್ರೀ ಉದ್ಭವ ರೌದ್ರನಾಥೇಶ್ವರ ಕ್ಷೇತ್ರ, ನಡುಬೊಟ್ಟು ದೇವರ ಅಂಗಣದಲ್ಲಿ , ತಾ. 15-12-2025 ನೇ ಸೋಮವಾರ ಬೆಳಿಗ್ಗೆ 10.00ಕ್ಕೆ ಸರಿಯಾಗಿ ದೇವರ ಸನ್ನಿಧಾನದಲ್ಲಿ 101 ಸೀಯಾಳ ಅಭಿಷೇಕ ಹಾಗೂ ಮಧ್ಯಾಹ್ನ 12.30ಕ್ಕೆ ಸರಿಯಾಗಿ ಶ್ರೀ ಉದ್ದವ ರೌದ್ರನಾಥೇಶ್ವರ ಸ್ವಾಮಿಗೆ ಸಂಕ್ರಮಣ ಮಹಾಪೂಜೆ, ಧರ್ಮದೈವಗಳಿಗೆ ಸಂಕ್ರಮಣ ಸೇವೆ ಹಾಗೂ ಪಂಜುರ್ಲಿ ಮೂಲ ದೈವಸ್ಥಾನದ ಜೀರ್ಣೋದ್ಧಾರದ ಸದುದ್ದೇಶಕ್ಕೆ ಗಣಹೋಮದೊಂದಿಗೆ ಮೂಲ ಧನ ಸಂಗ್ರಹಣ (ಪುಂಡಿ ಪಣವು) ಸಹಿತ ಲಕ್ಷ್ಮೀಪೂಜೆ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆಯೊಂದಿಗೆ
ಅದೇ ದಿನ ಸಂಜೆ ಗಂಟೆ 5.30ಕ್ಕೆ ಸರಿಯಾಗಿ ಚೌಕಿಪೂಜೆಯೊಂದಿಗೆ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ, ಕಟೀಲು ಇವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಪುಣ್ಯ ಕಥಾಭಾಗವನ್ನು ಆಡಿ ತೋರಿಸಲಿರುವರು. ಭಕ್ತಾಭಿಮಾನಿಗಳು ಕುಟುಂಬ ಸಮೇತರಾಗಿ ಆಗಮಿಸಿ, ತನು-ಮನ-ಧನಗಳಿಂದ ಸಹಕರಿಸಿ, ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ, ಧರ್ಮದರ್ಶಿಗಳು ಮತ್ತು ಆಡಳಿತ ಮೊಕ್ತೇಸರರು , ಶ್ರೀ ಕ್ಷೇತ್ರ ನಡುಬೊಟ್ಟು .

