ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಶಿರ್ತಾಡಿ ಯ ಜೊಯ್ಲಿನ್ ಲೋಬೋ

0
31


ವರದಿ ರಾಯಿ ರಾಜ ಕುಮಾರ
ಶಿರ್ತಾಡಿ ಮೂಲದ ಅಂತರಾಷ್ಟ್ರೀಯ ಕ್ರೀಡಾಪಟು ಜೊಯ್ಲಿನ್ ಮ್ಯುರಲ್ ಲೋಬೋ ಅವರಿಗೆ 2025ನೇ‌ ಸಾಲಿನ ದ.ಕ‌ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲ್ಲೂಕಿನ ವಾಲ್ವಾಡಿ ಗ್ರಾಮದವರಾದ ಜೊಯ್ಲಿನ್ ಅವರು ಮೂಡಬಿದಿರೆಯ ಆಳ್ವಾಸ್‌ನಲ್ಲಿ ಕಾಲೇಜು ಶಿಕ್ಷಣ ಪಡೆದ ಅವರು, ಅಣ್ಣಾಮಲೈ ವಿಶ್ವವಿಧ್ಯಾಲಯದಲ್ಲಿ ಪದವಿ ಪಡೆದಿರುತ್ತಾರೆ. ಶಾಲಾ ಕಾಲೇಜು ಹಂತದಲ್ಲಿಯೇ ಅಥ್ಲೆಟಿಕ್ಸ್‌ ನ ತ್ರಿವಿಧ ಜಿಗಿತ ವಿಭಾಗದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದು, ನಿರ್ದಿಷ್ಟ ಗುರಿಯೊಂದಿಗೆ ಸಾಧನೆ ಮಾಡಿದವರು.
ಜೊಯ್ಲಿನ್ ರವರು ಅಂತರರಾಷ್ಟ್ರೀಯ ಮಟ್ಟದಲ್ಲಿ 5ಬಾರಿ ಭಾರತವನ್ನು ಪ್ರತಿನಿಧಿಸಿದ್ದರೆ, ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ 20 ಬಾರಿ ಕರ್ನಾಟಕವನ್ನು ಪ್ರತಿನಿಧಿಸಿ ರಾಜ್ಯಮಟ್ಟದ ದಾಖಲೆ ಹೊಂದಿರುವ ಜೊತೆಗೆ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. ಉಳಿದಂತೆ, ರಾಜ್ಯಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ 6 ಬಾರಿ ಹಾಗೂ ಆಲ್ ಇಂಡಿಯಾ ಪಬ್ಲಿಕ್ ಸೆಕ್ಟರ್ ಕ್ರೀಡಾಕೂಟದಲ್ಲಿ ಭಾರತೀಯ : ಜೀವವಿಮೆಯನ್ನು 17 ಬಾರಿ ಪ್ರತಿನಿಧಿಸಿದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.
.

LEAVE A REPLY

Please enter your comment!
Please enter your name here