ವರದಿ ರಾಯಿ ರಾಜ ಕುಮಾರ್
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮೂಡುಬಿದಿರೆ ಬಿಸಿ ಟ್ರಸ್ಟ್ ಹಾಗೂ ಪಡುಕೋಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ ಹೈನುಗಾರಿಕೆ ತರಬೇತಿ ಶಿಬಿರ ನಡೆಯಿತು. ತರಬೇತಿಯ ಅಧ್ಯಕ್ಷತೆಯನ್ನು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಧರ್ಮರಾಜ ಭಂಗ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಪಶುವೈದ್ಯ ಡಾಕ್ಟರ್ ಮಲ್ಲಿಕಾರ್ಜುನ ಅವರ ಮಾಹಿತಿಯನ್ನು ಒದಗಿಸಿದರು.
ಅವರು ತಮ್ಮ ಮಾಹಿತಿಯಲ್ಲಿ ಹೈನುಗಾರಿಕೆಯಿಂದ ದೊರಕುವ ಸೌಲಭ್ಯಗಳು ಹಾಗೂ ಉತ್ತಮ ರೀತಿಯಲ್ಲಿ ಲಾಭ ಪಡೆಯುವ ಕ್ರಮಗಳನ್ನು, ವಿಧಾನಗಳನ್ನು ತಿಳಿಯಪಡಿಸಿದರು. ಹೈನುಗಾರಿಕೆಯಲ್ಲಿ ಕಂಡುಬರುವ ದೋಷಗಳನ್ನು ಕೂಡ ನಿವಾದಿಸಿಕೊಳ್ಳುವ ಬಗೆಯನ್ನು ಮನದಟ್ಟು ಮಾಡಿದರು.
ಸೇವಾ ಪ್ರತಿನಿಧಿ ಶಶಿರೇಖಾ ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು.